ನಿನ್ನೆ ನಡೆದ ‘ವಾರದ ಕಥೆ ಕಿಚ್ಚನ ಜತೆ’ ಎಪಿಸೋಡಿನಲ್ಲಿ ಸ್ಪರ್ಧಿ ದಿವಾಕರ್ಗೆ ಕಿಚ್ಚ ಸುದೀಪ್ ಸಖತ್ ಆಗಿ ತರಾಟೆಗೆ ತೆಗೆದುಕೊಂಡ್ರು. ಇದಕ್ಕೆ ಕಾರಣ ದಿವಾಕರ್ ಅವರ ಮಿತಿ ಮೀರಿದ ವರ್ತನೆ ಹಾಗೂ ಎಲ್ಲೆಯಿಲ್ಲದ ಮಾತುಗಳು ಎನ್ನಲಾಗ್ತಿದೆ.
ನಿನ್ನೆಯೂ ಕೂಡ ಮನೆಯ ಸದಸ್ಯರ ಯೋಗಕ್ಷೇಮ ವಿಚಾರಿಸಿಕೊಂಡ್ರು ಸುದೀಪ್. ಈ ವೇಳೆ ಮಾತಿಗೆ ಮುಂದಾದ ದಿವಾಕರ್, ಸುದೀಪ್ ಎದುರೆ ಮನೆಯವರ, ಬಿಗ್ಬಾಸ್ ಶೋ ಹಾಗೂ ವೋಟ್ ಮಾಡಿದ ಜನರ ಬಗ್ಗೆ ಕೇವಲವಾಗಿ ಮಾತನಾಡಿದ್ರು. ಅದರಲ್ಲಿಯೂ ಜಯ ಶ್ರೀನಿವಾಸ್ ಅವರನ್ನು ಕೀಳು ಮಾತುಗಳಿಂದ ಹೀಯಾಳಿಸಿದ ದಿವಾಕರ್, ಇವರಂತೆ ನಾನು ನಾಟಕ ಮಾಡೊಲ್ಲ. ಜನರಿಂದ ದುಡ್ಡು ಪಡೆದುಕೊಂಡು ಮೋಸ ಮಾಡುವ 420 ಇವರು ಎಂದು ಜಯ ಶ್ರೀನಿವಾಸನ್ ಅವರ ವೃತ್ತಿ ಬಗ್ಗೆ ಮಾತನಾಡಿದ್ರು. ಜತಗೆ ನಂಗೆ ಬಿಗ್ಬಾಸ್ ಬಗ್ಗೆ ಆಸೆಯಿಲ್ಲ, ಇವತ್ತೇ ಬೇಕಾದ್ರೆ ಹೊರಗೆ ಹೋಗುತ್ತೇನೆ. ಜನ ನಂಗೆ ವೋಟ್ ಹಾಕದಿದ್ರೂ ಚಿಂತೆಯಿಲ್ಲ ಎಂದು ಹೇಳುವ ಮೂಲಕ ತಮ್ಮ ನಾಲಿಗೆಯನ್ನು ಹರಿಬಿಟ್ಟರು ದಿವಾಕರ್.
ದಿವಾಕರ್ ಅವರ ಅಹಂಕಾರದ ಮಾತುಗಳು ಸುದೀಪ್ ಅವರಿಗೆ ಕೋಪ ತರಿಸಿದಂತೆ ಕಾಣಿಸಿತ್ತು. ತಮ್ಮ ಮಾತುಗಳಿಂದಲೇ ದಿವಾಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಸುದೀಪ್, ಬಿಗ್ಬಾಸ್ ಮನೆಗೆ ನಾವು ನಿಮ್ಮನ್ನು ಕರೆದಿಲ್ಲ, ನೀವೇ ಬಂದಿದ್ದು. ಮನೆಯಲ್ಲಿರುವ ಸದಸ್ಯರು ನಿಮ್ಮ ವೃತ್ತಿ ಬಗ್ಗೆ ಮಾತನಾಡಿಲ್ಲ. ಆದರೆ, ನೀವು ಅವರ ಬಗ್ಗೆ ಹೀಗೆ ಮಾತನಾಡಿದ್ದು ಸರಿಯಲ್ಲ. ನೀವಷ್ಟೇ ಕಷ್ಟಪಟ್ಟಿಲ್ಲ, ಎಲ್ಲರೂ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ನಾನು ಕೂಡ ಕಷ್ಟಪಟ್ಟೇ ಮೇಲೆ ಬಂದಿದ್ದೇನೆ. ನಿಮಗೆ ವೋಟ್ ಹಾಕುವ ಜನಗಳ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಹೇಳುವ ಮೂಲಕ ಕ್ಲಾಸ್ ತೆಗೆದುಕೊಂಡ್ರು.