ಕೊಚ್ಚಿ: ನಟಿ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ವಿಶೇಷ ತನಿಖಾ ದಳ(ಎಸ್ಐಟಿ) ಪೂರಕ ಆರೋಪಪಟ್ಟಿ ಸಲ್ಲಿಸಿದ್ದು, ನಟಿಯ ಮೇಲೆ ಅತ್ಯಾಚಾರಕ್ಕೆ ನಟ ದಿಲೀಪ್ಗಿದ್ದ ಅನೈತಿಕ ಸಂಬಂಧವೇ ಮೂಲ ಕಾರಣ ಎಂದು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಅಂಗಮಾಲಿ ಮ್ಯಾಜಿಸ್ಪ್ರೇಟ್ ಕೋರ್ಟ್ಗೆ ಎಸ್ಐಟಿ 1450 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಪ್ರಕರಣದಲ್ಲಿ ಒಟ್ಟು 12 ಆರೋಪಿಗಳನ್ನು ಹೆಸರಿಸಲಾಗಿದ್ದು, ದಿಲೀಪ್ 8ನೇ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಸಂತ್ರಸ್ತ ನಟಿ ಮೊದಲ ಸಾಕ್ಷಿಯಾದರೆ, ದಿಲೀಪ್ ಅವರ ಮಾಜಿ ಪತ್ನಿ ಮಂಜು ವಾರಿಯರ್ 8ನೇ ಹಾಗೂ ಹಾಲಿ ಪತ್ನಿ ಕಾವ್ಯಾ ಮಾಧವನ್ ಸೇರಿದಂತೆ ಅನೇಕ 50 ಸೆಲೆಬ್ರಿಟಿಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ.
ಸಂತ್ರಸ್ಥ ನಟಿಯು ದಿಲೀಪ್ ಹಾಗೂ ಕಾವ್ಯಾ ಮಾದವನ್ಗೆ ಇದ್ದ ಅನೈತಿಕ ಸಂಬಂಧದ ಡಿಜಿಟಲ್ ಪುರಾವೆಗಳನ್ನು ದಿಲೀಪ್ನ ಮಾಜಿ ಹೆಂಡತಿ ಮಂಜು ವಾರಿಯರ್ಗೆ ಕಳುಹಿಸಿದ್ದರು. ಹೀಗಾಗಿ ದಿಲೀಪ್ ಸಂತ್ರಸ್ತ ನಟಿ ವಿರುದ್ಧ ಪ್ರತೀಕಾರ ತೀರಿಸಲು ಕಾಯುತ್ತಿದ್ದರು ಎಂದು ಎಸ್ಐಟಿ ವರದಿಯಲ್ಲಿ ಹೇಳಿಕೊಂಡಿದೆ.
ಅತ್ಯಾಚಾರ ಸಂತ್ರಸ್ತೆ ಮೇಲಿನ ಹಗೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು, ಅಲ್ಲದೇ ದಿಲೀಪ್ ತಮ್ಮ ಸಹ ನಟರೊಂದಿಗೆ ಆಕೆಗೆ ಸಿನಿಮಾ ಕ್ಷೇತ್ರದಲ್ಲಿ ಪ್ರಗತಿಯನ್ನು ಕುಂಠಿತಗೊಳಿಸಲು ಕೇಳಿಕೊಂಡಿದ್ದ. ಈ ಬಗ್ಗೆ ಹಲವಾರು ಸೆಲೆಬ್ರೆಟಿಗಳು ಎಸ್ಐಟಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಸಂತ್ರಸ್ತೆ ಕುಟುಂಬ ಸದಸ್ಯರು ಕೂಡಾ ಹಲವಾರು ಪ್ರಮುಖ ಸಾಕ್ಷಿ ನೀಡಿದ್ದು ಇವುಗಳು ದಿಲೀಪ್ ಮತ್ತು ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನೀಲ್ ಕುಮಾರ್ ಸುರೇಂದ್ರನ್ ಆರೋಪಗಳನ್ನು ಸಾಬೀತು ಪಡಿಸಲು ಸಾಕಾಗಿದೆ.
ಎಸ್ಐಟಿ ಅಧಿಕಾರಿಯೊಬ್ಬರ ಪ್ರಕಾರ, ದಿಲೀಪ್ನೊಂದಿಗೆ ತನ್ನ ಒಡನಾಟದ ಕುರಿತು ಆರೋಪಿ ಸುನಿ ನೀಡಿರುವ ಹೇಳಿಕೆಯನ್ನು ನಾವು ನಿಲ್ಷ್ಯಕ್ಷಿಸುವಂತಿಲ್ಲ. ಏಕೆಂದರೆ ನಮಗೆ ನಮಗೆ ದೃಢವಾದ ಪುರಾವೆಗಳಿವೆ’ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ವಿಪಿನ್ ಲಾಲ್ ಮತ್ತು ಸಿವಿಲ್ ಪೋಲಿಸ್ ಅಧಿಕಾರಿ ಪಿ.ಕೆ.ಅನೀಶ್ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾರೆ.