ಮನೋರಂಜನೆ

ನೋಟು ನಿಷೇಧಿಸಿ ಅತೀ ದೊಡ್ಡ ತಪ್ಪು ಮಾಡಿದ ಕೇಂದ್ರ ಸರಕಾರ; ದೇಶದ ಕ್ಷಮೆ ಕೇಳಲು ಪ್ರಕಾಶ್ ರೈ ಒತ್ತಾಯ

Pinterest LinkedIn Tumblr

ಚೆನ್ನೈ: ನೋಟು ನಿಷೇಧ ಮಾಡಿ ಒಂದು ವರ್ಷ ಪೂರ್ಣಗೊಂಡಿದ್ದು, ಅತಿ ದೊಡ್ಡ ತಪ್ಪು ಮಾಡಿರುವ ಕೇಂದ್ರ ಸರ್ಕಾರ ದೇಶದ ಜನರ ಕ್ಷಮೆ ಕೇಳುವಂತೆ ನಟ ಪ್ರಕಾಶ್ ರೈ ಒತ್ತಾಯಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು “ಸಂಬಂಧಪಟ್ಟವರ ಗಮನಕ್ಕೆ” ಎಂಬ ಶೀರ್ಷಿಕೆ ನೀಡಿದ್ದಾರೆ. “ಶ್ರೀಮಂತರು ತಮ್ಮ ಕಪ್ಪು ಹಣವನ್ನು ಹೊಳೆಯುವ ಹೊಸ ನೋಟುಗಳಿಗೆ ಬದಲಾಯಿಸಲು ದಾರಿಗಳು ಕಂಡುಕೊಂಡರು. ಇದರಿಂದ ಹತ್ತಾರು ಲಕ್ಷ ಅಸಹಾಯಕ ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಡೋಲಾಯಮಾನ ಆಯಿತು. ನಮ್ಮ ಕಾಲ ಘಟ್ಟದ ಅತಿ ದೊಡ್ಡ ತಪ್ಪು ನಿರ್ಣಯಕ್ಕೆ ಕ್ಷಮೆ ಕೇಳುವ ಮನಸ್ಸು ಮಾಡಿದಿರಾ?” ಎಂದು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ನವೆಂಬರ್ ಎಂಟರಂದು ಪ್ರಧಾನಿ ನರೇಂದ್ರ ಮೋದಿ ಐನೂರು, ಸಾವಿರ ರುಪಾಯಿ ನೋಟುಗಳ ನಿಷೇಧದ ಘೋಷಣೆ ಮಾಡಿದ್ದರು. ಕಪ್ಪು ಹಣದ ನಿಯಂತ್ರಣಕ್ಕೆ ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವು ದೊರೆಯದಂತೆ ಮಾಡಲು ಈ ನಿರ್ಧಾರ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದ್ದರು.

ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನವಾಗಿರುವುದಕ್ಕೆ ಅವರು ನನಗಿಂತ ದೊಡ್ಡ ನಟ ಎಂದು ಟೀಕಿಸಿದ್ದರು.

Comments are closed.