ಮನೋರಂಜನೆ

ಬಿಗ್‌ಬಾಸ್‌ನಲ್ಲಿ ಕೇವಲ ಮೂರೇ ದಿನಕ್ಕೆ 2.5 ಕೋಟಿ ರೂ. ಸಂಭಾವನೆ ಪಡೆದ ನಟಿ !

Pinterest LinkedIn Tumblr

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ರಿಯಾಲಿಟಿ ಶೋ ಫೇಮಸ್‌ ಆಗುತ್ತಿದೆ. ಒಂದು ಹಂತದಲ್ಲಿ ಇದನ್ನು ಕಾಂಟ್ರವರ್ಸಿ ಶೋ ಎಂದು ಕರೆದ್ರು ಕೂಡ ಜನರು ಮುಗಿಬಿದ್ದು ಈ ಕಾರ್ಯಕ್ರಮವನ್ನು ನೋಡುತ್ತಿದ್ದಾರೆ.

ಹಿಂದಿ, ಕನ್ನಡ ಸೇರಿದಂತೆ ಇತ್ತೀಚಿಗೆ ತಮಿಳು ಹಾಗೂ ತೆಲುಗು ಭಾಷೆಯಲ್ಲಿಯೂ ಬಿಗ್‌ಬಾಸ್‌ ಶೋ ಪ್ರಾರಂಭವಾಗಿದೆ. ಸದ್ಯ ಹಿಂದಿಯಲ್ಲಿ 11 ನೇ ಸೀಸನ್‌ ಪ್ರಾರಂಭಗೊಂಡಿದ್ದರೆ, ಕನ್ನಡದಲ್ಲಿ ಸೀಸನ್‌ 5 ಸ್ಟಾರ್ಟ್‌ ಆಗಿದೆ. ಪ್ರತಿ ಸೀಸನ್‌ನಲ್ಲಿ ಒಂದಿಷ್ಟೂ ಸೆಲೆಬ್ರಿಟಗಳನ್ನು ಕರೆತಂದು, ಅವರಿಗೆ ಹಲವು ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಕೊನೆಯ ಹಂತದವರೆಗೆ ಬಿಗ್‌ಬಾಸ್‌ ಮನೆಯಲ್ಲಿ ಉಳಿಯುವ ಕಂಟೆಸ್ಟಂಟ್‌ಗೆ ಬಿಗ್‌ಬಾಸ್‌ ವಿನ್ನರ್‌ ಎನ್ನುವ ಕಿರೀಟ್‌ ಪ್ರಾಪ್ತಿಯಾಗುತ್ತದೆ.

ಇತ್ತೀಚೆಗೆ ಸಾಮಾನ್ಯ ಸ್ಪರ್ಧಿಗಳು ಕೂಡ ಬಿಗ್‌ಬಾಸ್‌ ಮನೆಗೆ ಪ್ರವೇಶ ಪಡೆಯುವ ಅವಕಾಶ ನೀಡಲಾಗಿದೆ. ಹೀಗೆ ಬಿಗ್‌ಬಾಸ್ ಮನೆಗೆ ಹೋಗುವ ಸ್ಪರ್ಧಿಗಳಿಗೆ ಸಂಭಾವನೆ ಎಷ್ಟು ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದುವರೆಗೆ ಅತಿ ಹೆಚ್ಚು ಹಣ ಪಡೆದಿರುವ ಬಿಗ್‌ಬಾಸ್‌ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತಿದೆ.

ಪಮೇಲಾ ಆ್ಯಂಡರ್ಸನ್ :
ಹಾಲಿವುಡ್‌ ನಟಿ ಪಮೇಲಾ ಆ್ಯಂಡರ್ಸನ್ ಹಿಂದಿ ಬಿಗ್‌ಬಾಸ್‌ನ ನಾಲ್ಕನೇ ಸೀಸನ್‌ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಕೇವಲ ಮೂರು ದಿನಗಳ ಕಾಲ ಉಳಿದುಕೊಂಡಿದ್ದ ಇವರು ಬರೋಬ್ಬರಿ 2.5 ಕೋಟಿ ರೂ. ಸಂಭಾವನೆ ಪಡೆದಿದ್ದರು.

ಹೀನಾ ಖಾನ್‌ :
ಸದ್ಯ ಪ್ರಾರಂಭವಾಗಿರುವ ಬಿಗ್‌ಬಾಸ್ ಸೀಸನ್‌ 11 ರ ಸ್ಪರ್ಧಯಾಗಿರುವ ಇವರು ಒಂದು ವಾರಕ್ಕೆ 8 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಕರಿಶ್ಮಾ ತಾನ್ನಾ :
ಸಂಜಯ್‌ ದತ್‌ ಜೀವನಾಧಾರಿತ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸುತ್ತಿರುವ ನಟಿ ಕರಿಶ್ಮಾ ತಾನ್ನಾ, ಬಿಗ್‌ಬಾಸ್ ಮನಯಲ್ಲಿದ್ದಾಗ ಒಂದು ವಾರಕ್ಕೆ 10ಲಕ್ಷ ರೂ. ಸಂಭಾವನೆ ಪಡೆದಿದ್ದರು.

ರಿಮಿ ಸೇನ್‌ :
ಬೆಳ್ಳಿ ತೆರೆಯಿಂದ ದೂರ ಉಳಿದಿರುವ ಬಾಲಿವುಡ್‌ ನಟಿ ರಿಮಿ ಸೇನ್‌ ಬಿಗ್‌ಬಾಸ್‌ ಮನೆಯಲ್ಲಿ ಒಂದು ವಾರಕ್ಕೆ 2 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದರು.

ಕರಣ್‌ ಮೆಹ್ರಾ :
ಈತ ತನಗಿರುವ ಜನಪ್ರಿಯತೆಯಿಂದ ಸಿಕ್ಕಾಪಟ್ಟೆ ದುಡ್ಡು ಮಾಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಒಂದು ವಾರಕ್ಕೆ 1 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರಂತೆ ಕರಣ್‌ ಮೆಹ್ರಾ.

Comments are closed.