ಮನೋರಂಜನೆ

ZevA ಆ್ಯಪ್ ಬಿಡುಗಡೆ ಮಾಡಿದ ನಟಿ ಪ್ರಣೀತಾ

Pinterest LinkedIn Tumblr


ಈಗಾಗಲೇ ಬೆಂಗಳೂರು ಸಿಟಿ ಪೊಲೀಸ್ ಬಳಕೆಮಾಡುತ್ತಿದ್ದ ಸುರಕ್ಷಾ ಆ್ಯಪ್ ನ ಸಹವರ್ತಿ ಯಾಗಿ s o s ಬಟನ್ ಬಳಕೆ ಮಾಡಿಕೊಂಡು ಜನರಿಗೆ ಸರಳವಾಗಿ ಕೈಗೆಟುಕುವ ರೀತಿಯಲ್ಲಿ ಆರೋಗ್ಯ ಸುರಕ್ಷಾ ಮಾಹಿತಿಗಳನ್ನು ಪ್ರಸರಣೆ ಮಾಡುವುದಾಗಿದೆ.

‘ಡೋರಿ’ ಹೆಲ್ತ್ ಸಂಸ್ಥೆಯು ಈ ಹೊಸ ಆ್ಯಪ್ ನ ಬಳಕೆಗೆ ಚಾಲನೆ ನೀಡಿದೆ. ಈ ಸಂದರ್ಭದಲ್ಲಿ ತಮ್ಮ ಆ್ಯಪ್ ನ ಗುರಿಯು ಜನಸಾಮಾನ್ಯರನ್ನು ಸುಲಭವಾಗಿ ತಲುಪಿಸುವ ಮಾರ್ಗವಾಗಿದೆ. ಹಾಗೂ ಬಳಕೆದಾರರು ಮತ್ತು ಆರೋಗ್ಯ ರಕ್ಷಕ ಆ್ಯಪ್ ಗಳ ನಡುವಿನ ಅಂತರವನ್ನು ಕಡಿಮೆಗೊಳಿಸಲು ಉತ್ತಮ ಸಾಧನವಾಗಿದೆ. ಇದರಿಂದಾಗಿ ಜನರು ತಮ್ಮ ಮೊಬೈಲ್ ಗಳ ಮೂಲಕವಾಗಿ ಬಹಳ ಸರಳ ವಿಧಾನಗಳಲ್ಲಿ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ.

ಈ ಆ್ಯಪ್ ನ ಉದ್ಘಾಟನಾ ಸಮಾರಂಭದಲ್ಲಿ ಬಹುಭಾಷ ನಟಿ ಪ್ರಣಿತಾ ಸುಭಾಷ್, ಮೇಕ್ ಇನ್ ಇಂಡಿಯಾ ಫೌಂಡೇಷನ್ ನ ಮಹಿಳಾ ಸಬಲೀಕರಣ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿರುವ ಡಾ.ಪದ್ಮಾಕ್ಷಿ, ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿರುವ ಡಾ.ಬಿ.ಎಲ್ ಮುರುಳೀಧರ್ ಹಾಜರಿದ್ದರು.

ಡಾ. ಬಿ.ಎಲ್ ಮುರುಳೀದರ್ ಈ ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಜ಼ೀವಾ ಆ್ಯಪ್ ಅನ್ನು ಹೊರತಂದಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ಪೊಲೀಸ್ ಹಾಗೂ ವೈದ್ಯಕೀಯ ಕ್ಷೇತ್ರ ಎರಡನ್ನು ಸಹ ಸಾರ್ವಜನಿಕರು ಏಕಕಾಲಕ್ಕೆ ಸುಲಭವಾಗಿ ಬಳಕೆಮಾಡಲು ಅರ್ಹವಾಗಿರುವ ಈ ಆ್ಯಪ್ ನಿಜಕ್ಕೂ ಆರೋಗ್ಯಸ್ನೇಹಿ ಮತ್ತು ಬಳಕೆದಾರರ ಸ್ನೇಹಿ ಆ್ಯಪ್ ಆಗಿದೆ. ಕಂಪ್ಯೂಟರ್ ತಂತ್ರಜ್ಞಾನವನ್ನು ಮತ್ತಷ್ಟು ತಾಂತ್ರಿಕವಾಗಿ ಬಳಕೆಮಾಡಿಕೊಂಡು ಭವಿಷ್ಯದ ದಿನಗಳಲ್ಲಿ ಇದೇ ರೀತಿಯಾಗಿ ಇತರೆ ಕ್ಷೇತ್ರಗಳಲ್ಲೂ ಸಹ ಮತ್ತಷ್ಟು ಆ್ಯಪ್ ಗಳನ್ನು ಪರಿಚಯಿಸುವ ಪ್ರಯತ್ನ ಮಾಡಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಜ಼ೀವಾ ಆ್ಯಪ್ ಡಾಕ್ಟರ್ ಗಳು ಸಮಯಕ್ಕೆ ಸರಿಯಾಗಿ ರೋಗಿಗಳೊಂದಿಗೆ ಮುಕ್ತವಾಗಿ ಮತ್ತು ನೇರವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಿದೆ. ಸಾಂಪ್ರದಾಯಿಕ ವಿಧಾನಕ್ಕೆ ಆಧುನಿಕ ಸ್ಪರ್ಶ ನೀಡಿರುವ ರೀತಿಯಲ್ಲಿ ಈ ಆ್ಯಪ್ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ತಿಳಿದುಕೊಳ್ಳುವ ಉತ್ತಮ ಕೈಪಿಡಿ.

ಈ ಜ಼ೀವಾ ಆ್ಯಪ್ ನ ಬಳಕೆ ಮಾಡಿಕೊಳ್ಳುವ ರೋಗಿಗಳು ತಮಗೆ ಅಗತ್ಯವಿರುವ ನರ್ಸ್ ಗಳು, ಆಹಾರತಜ್ಞರು, ಪಿಜಿಯೋಥೆರಪಿಸ್ಟ್ ಗಳು, ಆರೋಗ್ಯ ತಜ್ಞರುಗಳನ್ನು ಸಂಪರ್ಕಿಸುವಂತೆ ಅನುಕೂಲ ಈ ಆ್ಯಪ್ ಹೊಂದಿದೆ.

ಈ ಆ್ಯಪ್ ನ ಸೃಷ್ಟಿಗೆ ಕಾರಣವಾದ ಶ್ರೀನಿವಾಸ್ ಶಾಸ್ತ್ರಿ ಹೇಳುವಂತೆ ತುರ್ತು ಸಮಯದಲ್ಲಿ ಈ ಆ್ಯಪ್ ನ್ನು ರೋಗಿಗಳು ತಮ್ಮ ಮೊಬೈಲ್ ನಲ್ಲಿ ಬೆಂಗಳೂರು ನಗರ ಪೊಲೀಸ್ ರ ಸುರಕ್ಷಾ ಆ್ಯಪ್ ಆನ್ ಮಾಡಿ SOS ಬಟನ್ ಆನ್ ಮಾಡಿ ಬಹಳ ಸರಳ ರೀತಿಯಲ್ಲಿ ಆರೋಗ್ಯ ಸಲಹೆಗಳು ಮತ್ತು ಡಾಕ್ಟರ್ ಗಳ ಸಂಪರ್ಕ ಕ್ಕೆ ಸಿಗಬಹುದು ಎಂದಿದ್ದಾರೆ. ಎಲ್ಲಾ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಒಳಗೊಂಡಿರುವ ಈ ಜ಼ೀವಾ ಆ್ಯಪ್ ಅನ್ನು ಜನರು ಬಳಕೆಮಾಡಿಕೊಳ್ಳಬಹುದು.

Comments are closed.