ಮನೋರಂಜನೆ

ಬೆಳಗ್ಗೆ ಏಳುವುದೇ ಮ್ಯಾಜಿಕಲ್‌: ಶ್ರದ್ಧಾ ಕಪೂರ್‌

Pinterest LinkedIn Tumblr


ಮುಂಬೈ: ‘ಹಾಫ್‌ ಗರ್ಲ್‌ಫ್ರೆಂಡ್‌’ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿರುವ ಶ್ರದ್ಧಾ ಕಪೂರ್‌ ಬೆಳ್ಳಂಬೆಳಗ್ಗೆ ಏಳುವುದೇ ಮ್ಯಾಜಿಕಲ್‌ ಎಂದು ಅನುಭವ ಹಂಚಿಕೊಂಡಿದ್ದಾರೆ.

Shraddha ✔ @ShraddhaKapoor
Waking up early is just magical. Love love loveeee the morning energy! ☀️✨❤️
9:53 AM – 13 Feb 2017
365 365 Retweets 2,991 2,991 likes
ಚೇತನ್‌ ಭಗತ್‌ ಕಾದಂಬರಿ ‘ಹಾಫ್‌ ಗರ್ಲ್‌ಫ್ರೆಂಡ್‌’ ಆಧಾರಿತ ಸಿನಿಮಾವನ್ನು ಮೋಹಿತ್‌ ಸೂರಿ ನಿರ್ದೇಶಿಸಿದ್ದು, ಮೇ 19ರಂದು ಚಿತ್ರ ತೆರೆಕಾಣಲಿದೆ.

ಮುಂಜಾನೆ ಏಳುವುದು, ಪುಟಿಯುವ ಉತ್ಸಾಹವನ್ನು ಅನುಭವಿಸುವುದೇ ಸಂಭ್ರಮ. ಇಂಥದ್ದೇ ಅನುಭವವನ್ನು ನಟಿ ಶ್ರದ್ಧಾ ಕಪೂರ್‌ ಟ್ವಿಟರ್‌ ಮೂಲಕ ಹಂಚಿಕೊಂಡಿದ್ದು, ಆ ಅನುಭವ ಮ್ಯಾಜಿಕಲ್‌ ಎಂದಿದ್ದಾರೆ.

ಹಾಫ್‌ಗರ್ಲ್‌ಫ್ರೆಂಡ್‌ ಚಿತ್ರದಲ್ಲಿ ಶ್ರದ್ಧಾಗೆ ಅರ್ಜುನ್‌ ಕಪೂರ್‌ ನಾಯಕ. ಮಣಿರತ್ನಂ ಅವರ ‘ಓ ಕಾದಲ್‌ ಕಣ್ಮಣಿ’ ಚಿತ್ರದ ರಿಮೇಕ್‌ ‘ಓಕೆ ಜಾನು’ ಶ್ರದ್ಧಾ ಅಭಿನಯದ ಇತ್ತೀಚಿನ ಸಿನಿಮಾ.

ಭೂಗತ ಲೋಕದ ಕಥೆಯನ್ನು ಹೊಂದಿರುವ ‘ಹಸೀನಾ: ದಿ ಕ್ವೀನ್‌ ಆಫ್‌ ಮುಂಬೈ’ ಚಿತ್ರದಲ್ಲೂ ಶ್ರದ್ಧಾ ಪ್ರಮುಖ ಪಾತ್ರವಹಿಸಿದ್ದಾರೆ.

ಬಾಲಿವುಡ್‌ನಲ್ಲಿ ಖ್ಯಾತಿ ಗಳಿಸಲು ಕಾರಣವಾದ ‘ಆಶಿಕಿ–2’ ಸಿನಿಮಾ ಕುರಿತೂ ಶಗುಫ್ತಾ ರಫೀಕ್‌ಗೆ ಟ್ವೀಟಿಸಿರುವ ಶ್ರದ್ಧಾ, ಉತ್ತಮ ಕಥೆ ಮತ್ತು ಸದಾ ನೆನೆಪಿನಲ್ಲಿ ಉಳಿಯುವ ಸಿನಿಮಾ ಕೊಟ್ಟದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

Comments are closed.