ಮನೋರಂಜನೆ

ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಸಂಜನಾ ಬಿಗ್‌ಬಾಸ್‌‌ನಿಂದ ಹೊರಕ್ಕೆ !

Pinterest LinkedIn Tumblr

sanjana

ಬೆಂಗಳೂರು: ಬಿಗ್‌ಬಾಸ್‌‌ ಮನೆಯಿಂದ ಶನಿವಾರ ಸಂಜನಾ ಹೊರಬಿದ್ದಿದ್ದಾರೆ. ಈ ವಾರದಲ್ಲಿ ಕಾರುಣ್ಯ-ಸಂಜನಾ ಇಬ್ಬರು ಹೊರಬಿದ್ದಂತಾಗಿದೆ.

ವಾರದ ಮಧ್ಯದಲ್ಲಿಯೇ ಏಕಾಏಕಿ ಬಿಗ್‌ಬಾಸ್‌‌ ಕಾರುಣ್ಯ ಅವರನ್ನು ಮಧ್ಯರಾತ್ರಿ ಮನೆಯಿಂದ ಹೊರ ಕಳಿಸಿದ್ದರು. ಈಗ ಸಂಜನಾ ಔಟ್ ಆಗಿದ್ದಾರೆ. ಇದರಂತೆ ಈ ವಾರ ನಾಮಿನೇಟ್‌ ಆದ ಸದಸ್ಯರು ಪ್ರಥಮ್‌, ಮೋಹನ್‌, ಶಾಲಿನಿ, ಶೀತಲ್‌, ಭುವನ್‌ ಹಾಗೂ ಮಾಳವಿಕಾ. ಇನ್ನು ಬಿಗ್‌ಬಾಸ್‌ ಮನೆಯ ನಿಯಮಗಳನ್ನು ಉಲ್ಲಂಘಿಸಿ 5 ಹಳದಿ ಕಾರ್ಡ್‌ಗಳನ್ನ ಪಡೆದ ಸಂಜನಾ ಕೂಡ ಈ ಶನಿವಾರ ನೇರವಾಗಿ ನಾಮಿನೇಟ್‌ ಆಗಿದ್ದರು.

ಈ ಏಳು ಜನರಲ್ಲಿ ನಿನ್ನೆ ಬಿಗ್‌ಬಾಸ್‌ ಮನೆಯ ಪ್ರಯಾಣ ಮುಗಿಸಿದ್ದು ಸಂಜನಾ. ಮನೆಯಿಂದ ಹೊರ ಹೋಗುವಾಗ ಬಿಗ್‌ಬಾಸ್‌ ಒಂದು ವಿಶೇಷ ಅಧಿಕಾರವನ್ನ ಎಲಿಮಿನೇಟ್‌ ಆದವರಿಗೆ ನೀಡುತ್ತಾರೆ. ಇದರ ಪ್ರಕಾರ ಮುಂದಿನ ವಾರ ನೇರವಾಗಿ ನಾಮಿನೇಟ್‌ ಆಗಿದ್ದು ಶೀತಲ್‌ ಮತ್ತು ಪ್ರಥಮ್‌.

ಇದಕ್ಕೂ ಮುಂಚೆ ಬಿಗ್‌ಬಾಸ್‌‌ ಸುಳ್ಳು ಹೇಳಿ ಎಲ್ಲರನ್ನು ಪೇಚಿಗೆ ಸಿಲುಕಿಸಿದ್ದ ಸಂಜನಾಳ ವರ್ತನೆಯ ಕುರಿತು ಕಿಚ್ಚ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡರು.

Comments are closed.