ಮನೋರಂಜನೆ

‘ದಂಗಾಲ್’: ಮೊದಲ ದಿನ ಗಳಿಸಿದ್ದೇಷ್ಟು ಗೊತ್ತಾ?

Pinterest LinkedIn Tumblr

dangal
ನವದೆಹಲಿ: ಕ್ರಿಸ್ಮಸ್ ಮತ್ತೆ ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಅವರಿಗೆ ಅದೃಷ್ಟ ತಂದುಕೊಡುವಂತೆ ಕಾಣುತ್ತಿದೆ. ಅವರ ಇತ್ತೀಚಿನ ಕುಸ್ತಿ ಆಧಾರಿತ ಸಿನೆಮಾ ‘ದಂಗಾಲ್’ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಬಿಡುಗಡೆಯಾಗಿದ್ದು, ಮೊದಲ ದಿನವೇ ೨೯ ಕೋಟಿ ರೂ ಬಾಕ್ಸ್ ಆಫಿಸ್ ಗಳಿಕೆ ಕಂಡಿದೆ.
ಡಿಸ್ನಿ ಇಂಡಿಯಾ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ‘ದಂಗಾಲ್’ ಹಿಂದಿ ಅವತರಣಿಕೆ ೨೯.೭೮ ಕೋಟಿ ಗಳಿಸಿದ್ದರೆ, ತಮಿಳು ಮತ್ತು ತೆಲುಗು ಅವತರಿಣಿಕೆಗಳು ೫೯ ಲಕ್ಷ ರೂ ಗಳಿಸಿದೆ ಎಂದು ಶುಕ್ರವಾರ ಹೇಳಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಮಾಜಿ ರಾಷ್ಟೀಯ ಕುಸ್ತಿ ಚಾಂಪಿಯನ್ ಮಹಾವೀರ್ ಸಿಂಗ್ ಫೋಗಟ್ ಮತ್ತು ಅವರ ಹೆಣ್ಣು ಮಕ್ಕಳು ಗೀತಾ ಹಾಗು ಬಬಿತಾ ಕುರಿತಾದ ಚಿತ್ರ.
ಕೇಂದ್ರ ಸರ್ಕಾರದ ನೋಟು ಹಿಂಪಡೆತದ ನಿರ್ಧಾರದಿಂದ ಬಾಕ್ಸ್ ಆಫಿಸ್ ಗಳಿಕೆ ಕುಸಿಯಬಹುದಾದ ಸಂದೇಹ ಇತ್ತು, ಆದರೆ ಗಳಿಕೆ ಬಹಳ ಧನಾತ್ಮಕವಾಗಿ ಪ್ರಾರಂಭವಾಗಿದೆ.
ಬುಕ್ ಮೈ ಷೋ ಅಂತರ್ಜಾಲ ಟಿಕೆಟ್ ಕಾಯ್ದಿರಿಸುವ ಜಾಲತಾಣದಲ್ಲಿಯೂ ಒಳ್ಳೆಯ ಪ್ರಾರಂಭ ಕಂಡಿದ್ದು, ಮೊದಲ ದಿನದ ಗಳಿಕೆಯ ೩೩% ಕೊಡುಗೆ ಅಲ್ಲಿಂದಲೇ ಬಂದಿದೆ.
ಅಮೀರ್ ಖಾನ್ ಅವರ ಹಿಂದಿನ ಸಿನೆಮಾಗಳಾದ ‘ಪಿಕೆ’, ‘ಧೂಮ್ ೩’ ಮತ್ತು ‘೩ ಈಡಿಯಟ್ಸ್’ ಚಿತ್ರಗಳು ಕೂಡ ಕ್ರಿಸ್ಮಸ್ ಸಮಯಕ್ಕೆ ಬಿಡುಗಡೆ ಕಂಡು ಭಾರಿ ಯಶಸ್ಸು ಕಂಡಿದ್ದವು.

Comments are closed.