ಬಾಹುಬಲಿಯಲ್ಲಿ ಯುವ ಬಲ್ಲಾಳದೇವ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಮಿಂಚಿದ್ದರು. ಇದೀಗ ಬಾಹುಬಲಿ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಬಲ್ಲಾಳದೇವನ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಡಿಸೆಂಬರ್ 14 ರಾಣಾ ದಗ್ಗುಬಾಟಿ ಹುಟ್ಟುಹಬ್ಬದ ಹಿನ್ನೆಲೆ ಬಾಹುಬಲಿ ನಿರ್ದೇಶಕ ಎಸ್ಎಸ್ ರಾಜಮೌಳಿ ತಮ್ಮ ಟ್ವೀಟರ್ ಖಾತೆಯಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಇನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ಬಾಹುಬಲಿ-2 ರಾಣಾ ದಗ್ಗುಬಾಟಿ ಬಲ್ಲಾಳದೇವನ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಮಹಿಷ್ಮತಿ ಸಾಮ್ರಾಜ್ಯದ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಭಾಸ್ ಬಾಹುಬಲಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಅನುಷ್ಕಾ ಶೆಟ್ಟಿ ದೇವಸೇನಾ ಮತ್ತು ತಮನ್ನಾ ಭಾಟಿಯಾ ಅವಂತಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮನೋರಂಜನೆ
Comments are closed.