ಮನೋರಂಜನೆ

ಪ್ರಿಯಾಂಕಾ ಚೈಲ್ಡ್ ರೈಟ್ಸ್ ರಾಯಭಾರಿ

Pinterest LinkedIn Tumblr

priyanka-chopraಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ‘ಕ್ವಾಂಟಿಕೊ’ ಸೀರಿಯಲ್ ಮೂಲಕ ಹಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾಗಿದೆ. ಈಗ ಅವರು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಆದರೆ ಇದು ಯಾವುದೇ ಧಾರಾವಾಹಿ ಅಥವಾ ಸಿನಿಮಾದಿಂದಾಗಿ ಅಲ್ಲ. ಅವರು ಈಗ ದೊಡ್ಡಮಟ್ಟದಲ್ಲಿ ಸೌಂಡು ಮಾಡುತ್ತಿರುವುದು ಒಂದು ಘನ ಉದ್ದೇಶಕ್ಕಾಗಿ.

ಪ್ರಿಯಾಂಕಾ ಚೋಪ್ರಾ ಹೆಣ್ಣು ಮಕ್ಕಳ ಹಕ್ಕುಗಳನ್ನು ಪ್ರಚುರಪಡಿಸುವ ಸಲುವಾಗಿ ಈಗ ಯುನಿಸೆಫ್ ಗ್ಲೋಬಲ್ ಗುಡ್ವಿಲ್ ರಾಯಭಾರಿಯಾಗಿದ್ದಾರೆ. ನ್ಯೂಯಾರ್ಕ್ನ ಯುನಿಸೆಫ್ ಹೆಡ್ಕ್ವಾರ್ಟರ್ಸ್ನಲ್ಲಿ ನಡೆದ ಯುನಿಸೆಫ್ನ 70ನೇ ವಾರ್ಷಿಕೋತ್ಸವದಲ್ಲಿ ಅವರನ್ನು ಈ ರಾಯಭಾರಿಯಾಗಿ ಘೊಷಿಸಲಾಗಿದೆ. ಇದೇ ವೇಳೆ ಖ್ಯಾತ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹೆಮ್ ಹಾಲಿವುಡ್ ನಟರಾದ ಒರ್ಲಾಂಡೊ ಬ್ಲೂಮ್ ಜಾಕಿ ಚಾನ್, ಮಿಲ್ಲೀ ಬಾಬಿ ಬ್ರೌನ್ ಜತೆ ವೇದಿಕೆ ಹಂಚಿಕೊಳ್ಳುವ ಅವಕಾಶವೂ ಸಿಕ್ಕಿದೆ. ಹೀಗೆ ಎರಡೆರಡು ಅವಕಾಶಗಳು ಒಟ್ಟಿಗೇ ಒದಗಿ ಬಂದಿರುವುದಕ್ಕೆ ಪ್ರಿಯಾಂಕಾ ಭಾರಿ ಸಂತೋಷ ಹಾಗೂ ಸಂಭ್ರಮಕ್ಕೆ ಒಳಗಾಗಿದ್ದಾರೆ.

ಅಂದಹಾಗೆ, ಪ್ರಿಯಾಂಕಾ ಕಳೆದ ಹತ್ತು ವರ್ಷದಿಂದಲೂ ಯುನಿಸೆಫ್ ಜತೆ ಗುರುತಿಸಿಕೊಂಡಿದ್ದಾರೆ. ಆದರೆ ಈಗ ಹೆಣ್ಣು ಮಕ್ಕಳ ಹಕ್ಕುಗಳನ್ನು ಪ್ರಚುರ ಪಡಿಸಲೆಂದೇ ಅವರನ್ನು ವಿಶೇಷ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ‘ಹತ್ತು ವರ್ಷ ಕಳೆದಿದೆ ಎಂಬುವುದನ್ನು ನಂಬಲಿಕ್ಕೇ ಆಗುತ್ತಿಲ್ಲ. ನನ್ನನ್ನು ಯುನಿಸೆಫ್ಗೆ ಪರಿಚಯಿಸಿದ್ದಕ್ಕೆ ಡೇವಿಡ್ ಹಾಗೂ ಮಿಲ್ಲಿ ಅವರಿಗೆ ಕೃತಜ್ಞತೆಗಳು. ನಮ್ಮೊಳಗೊಂದಿಷ್ಟು ಮಾನವೀಯತೆ ಇನ್ನೂ ಉಳಿದಿದೆ ಎನ್ನುವಂಥ ಸಮಾನ ಮನಸ್ಕರ ಜತೆಗಿರಲು ತುಂಬ ಖುಷಿ ಎನಿಸುತ್ತಿದೆ’ ಎಂದು ಪ್ರಿಯಾಂಕಾ ಟ್ವೀಟ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.

Comments are closed.