ಮನೋರಂಜನೆ

ಶಾರುಖ್ ‘ರಯೀಸ್’ನಲ್ಲಿ ಸನ್ನಿ ಲಿಯೋನ್​

Pinterest LinkedIn Tumblr

sunney leoneಹಲವು ಚಿತ್ರಗಳಲ್ಲಿ ಐಟಂ ಸಾಂಗ್ಗಳಿಗೆ ನರ್ತಿಸುತ್ತಿದ್ದ ನಟಿ ಸನ್ನಿ ಲಿಯೋನ್ಗೆ ಈಗ ಸತ್ಸಮಯ ಸನ್ನಿಹಿತವಾಗಿದೆ ಎಂಬ ಮಾತು ಬಾಲಿವುಡ್ನಿಂದ ಕೇಳಿ ಬರುತ್ತಿದೆ. ಅದಕ್ಕೆ ಕಾರಣ, ‘ರಯೀಸ್’. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ಸಾಂಗ್ಗೆ ನರ್ತಿಸಿದ್ದಾರೆ. ಇದು ಸನ್ನಿ ಅಭಿಮಾನಿಗಳಿಗೆ ಒಂಥರ ಖುಷಿಯ ವಿಚಾರವಾದರೆ, ಸನ್ನಿಗೆ ಇದು ಅತ್ಯಂತ ಖುಷಿಯ ವಿಚಾರವಂತೆ. ಏಕೆಂದರೆ, ಈ ಚಿತ್ರದಲ್ಲಿ ಸನ್ನಿಗೆ ಶಾರುಖ್ ಖಾನ್ ಜತೆ ಹೆಜ್ಜೆ ಹಾಕುವ ಅವಕಾಶ ಲಭಿಸಿದ್ದರಿಂದ ಆಕೆ ಮೊಟ್ಟಮೊದಲ ಬಾರಿಗೆ ಖಾನ್ದಾನ್ ಪ್ರವೇಶಿಸಿದಂತಾಗಿದೆ. ಅಂದರೆ, ಶಾರುಖ್, ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್ ಈ ಮೂವರಲ್ಲಿ ಒಬ್ಬ ಖಾನ್ ಜತೆಗಾದರೂ ನಟಿಸಬೇಕು ಎಂಬುದು ಸನ್ನಿಯ ಆಸೆಯಂತೆ. ಅದು ಈಗ ಈಡೇರಿರುವುದರಿಂದ ಆಕೆ ಸಂತೋಷಪಟ್ಟಿದ್ದಲ್ಲದೆ, ಆ ಬಗ್ಗೆ ಟ್ವೀಟ್ ಮಾಡಿ ಶಾರುಖ್ ಜತೆ ಆ ಖುಷಿ ಹಂಚಿಕೊಂಡಿದ್ದಾರೆ.

ಅಂದಹಾಗೆ, ಸನ್ನಿ ಹೆಜ್ಜೆ ಹಾಕುತ್ತಿರುವುದು 1980ರಲ್ಲಿ ತೆರೆಕಂಡ ‘ಖುರ್ಬಾನಿ’ ಚಿತ್ರದ ‘ಲೈಲಾ ಓ ಲೈಲಾ..’ ಹಾಡಿಗೆ. ‘ಖುರ್ಬಾನಿ’ ಚಿತ್ರದಲ್ಲಿ ನಟಿ ಝೀನತ್ ಅಮಾನ್ ‘ಲೈಲಾ ಓ ಲೈಲಾ..’ ಎಂದು ಹೆಜ್ಜೆ ಹಾಕುತ್ತ ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಿದ್ದರು. ಈಗ ‘ರಯೀಸ್’ ಚಿತ್ರದಲ್ಲಿಯೂ ಅದೇ ಗೀತೆಯನ್ನು ಬಳಸಿಕೊಂಡಿದ್ದು, ಅದಕ್ಕೆ ಸನ್ನಿ ಲಿಯೋನ್ ಕುಣಿದಿದ್ದಾರೆ. ವಿಶೇಷವೆಂದರೆ ಶಾರುಖ್ ಖಾನ್ ಕೂಡ ಸನ್ನಿ ಜತೆ ಹೆಜ್ಜೆ ಹಾಕಿದ್ದಾರಂತೆ. ಅಂದು ಝೀನತ್ ಅಮಾನ್ ‘ಲೈಲಾ ಓ ಲೈಲಾ..’ ಎಂದು ಮಾಡಿದ್ದ ಮೋಡಿಯನ್ನು ಮಾದಕ ನೃತ್ಯ-ನಟನೆಗೆ ಹೆಸರಾಗಿರುವ ಸನ್ನಿ ಮೀರಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ. ಝೀನತ್ ಅವರನ್ನು ಮೀರಿಸಲು ಸನ್ನಿ ಅದ್ಯಾವ ಪರಿ ಹೆಜ್ಜೆ ಹಾಕಿರಬಹುದು ಎಂಬ ಕುತೂಹಲವೂ ಬಾಲಿವುಡ್ನಲ್ಲಿ ಸೃಷ್ಟಿಯಾಗಿದೆ

Comments are closed.