ಮನೋರಂಜನೆ

66ನೇ ಜನ್ಮದಿನಾಚರಣೆಯಿಂದ ದೂರ ಉಳಿದ ರಜನಿ

Pinterest LinkedIn Tumblr

rajaniಚೆನ್ನೈ: ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರಿಗೆ ಇಂದು 66ನೇ ವರ್ಷದ ಸಂಭ್ರಮ. ಆದರೆ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನದ ಹಿನ್ನೆಲೆ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿಲ್ಲ.

ಜಯಲಲಿತಾ ಅವರು ನಿಧನರಾದ ಕಾರಣ, ತನ್ನ ಜನ್ಮದಿನದ ಅದ್ದೂರಿ ಆಚರಣೆ ಬೇಡವೆಂದು ರಜನಿಕಾಂತ್‌ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಕಳೆದ ವರ್ಷ ಅತಿಯಾದ ಮಳೆಯಿಂದ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಪ್ರವಾಸ ಸ್ಥಿತಿ ಉಂಟಾಗಿತ್ತು. ಆಗಲೂ ಹುಟ್ಟು ಹಬ್ಬದ ಆಚರಣೆಯಿಂದ ರಜನಿ ದೂರ ಉಳಿದಿದ್ದರು.

1996ರ ಚುನಾವಣಾ ಪ್ರಚಾರದಲ್ಲಿ ‘ಮತ್ತೆ ಜಯಲಲಿತಾ ಅಧಿಕಾರಕ್ಕೆ ಬಂದರೆ, ಆ ದೇವರೂ ಸಹ ತಮಿಳುನಾಡನ್ನು ಉಳಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದನ್ನು ಇತ್ತೀಚಿನ ಸಂತಾಪ ಸೂಚನ ಸಭೆಯಲ್ಲಿ ರಜನಿ ನೆನಸಿಕೊಂಡರು. ನನ್ನ ಮಾತುಗಳಿಂದಾಗಿ ಜಯಲಲಿತಾ ಸೋಲು ಅನುಭವಿಸಬೇಕಾಯಿತು ಎಂದಿದ್ದರು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ, ನಟ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌ ಸೇರಿದಂತೆ ಅನೇಕ ಗಣ್ಯರು ಟ್ವಿಟರ್‌ ಮೂಲಕ ಶುಭ ಹಾರೈಸಿದ್ದಾರೆ.

ರಜನಿ: ಶಿವಾಜಿ ರಾವ್‌ ಗಾಯೆಕ್ವಾಡ್‌ ರಜನಿಕಾಂತ್‌ ಅವರ ಹುಟ್ಟು ಹೆಸರು. ಬೆಂಗಳೂರಿನಲ್ಲಿ ಬೆಳೆದ ರಜನಿ, ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಬಸ್‌ ಕಂಡಕ್ಟರ್‌ ಆಗಿ ವೃತ್ತಿ ಆರಂಭಿಸಿದವರು. ಮುಂದೆ ಸಿನಿಮಾ, ನಟನೆ ಸೆಳೆತದಿಂದಾಗಿ ಮದ್ರಾಸ್‌ ಕಡೆಗೆ ಹೊರಟರು. 1975ರಲ್ಲಿ ‘ಅಪೂರ್ವ ರಾಗಂಗಳ್‌’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.

Comments are closed.