ಹೈದರಾಬಾದ್ ನಲ್ಲಿ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಕಿರಿಯ ಪುತ್ರ ಅಖಿಲ್ ಫ್ಯಾಷನ್ ಡಿಜೈನರ್ ಶ್ರಿಯಾ ಭೂಪಲ್ ಜತೆ ವಿವಾಹ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತು.
ಉದ್ಯಮಿ ಜಿವಿಕೆ ಫ್ಯಾಮಿಲಿಯ ಶ್ರಿಯಾ ಭೂಪಲ್ ಅಖಿಲ್ ಪರಸ್ಪರ ಪ್ರೀತಿಸುತ್ತಿದ್ದು ಇಬ್ಬರ ಪ್ರೀತಿಗೆ ಎರಡು ಕುಟುಂಬಗಳು ಸಮ್ಮತಿ ಸೂಚಿಸಿತ್ತು. ಹೀಗಾಗಿ ಇಬ್ಬರ ವಿವಾಹ ನಿಶ್ಚಿತಾರ್ಥ ನಿನ್ನೆ ಹೈದರಾಬಾದ್ ನ ಅತಿಥಿ ಗೃಹವೊಂದರಲ್ಲಿ ನೆರವೇರಿತು.
ಈ ವಿವಾಹ ನಿಶ್ಚಿತಾರ್ಥಕ್ಕೆ ಉಭಯ ಕುಟುಂಬಗಳ ಸಂಬಂಧಿಕರು, ಆಪ್ತರು, ಗಣ್ಯರು ಭಾಗವಹಿಸಿದ್ದರು.