ಮನೋರಂಜನೆ

‘ಏಷ್ಯಾದ ಮಾದಕ ಮಹಿಳೆ’ ಎಂಬ ಹೆಗ್ಗಳಿಕೆಗೆ ಪಾತ್ರರಾದ ದೀಪಿಕಾ ಪಡುಕೋಣೆ

Pinterest LinkedIn Tumblr

deepika-padukone

ಮುಂಬೈ: ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಪರಾಭವಗೊಳ್ಳಿಸುವ ಮೂಲಕ ದೀಪಿಕಾ ಪಡುಕೋಣೆ 2016 ನೇ ಸಾಲಿನ ‘ಏಷ್ಯಾದ ಮಾದಕ ಮಹಿಳೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೀಪಿಕಾ ಪಡುಕೋಣೆ ಅವರು ಇದೇ ಮೊದಲ ಬಾರಿಗೆ ‘ಏಷ್ಯಾದ ಮಾದಕ ಮಹಿಳೆ’ ಪಟ್ಟವನ್ನು ಅಲಂಕರಿಸಿದ್ದಾರೆ. ಬ್ರಿಟನ್‌ ಮೂಲದ ‘ಈಸ್ಟರ್ನ್ ಐ’ ಪತ್ರಿಕೆ ಪ್ರತಿ ವರ್ಷದಂತೆ ಈ ವರ್ಷವು ಅತಿ ಹೆಚ್ಚು ಜನಪ್ರಿಯತೆ ಗಳಿಸಿದವರನ್ನು ಆಯ್ಕೆ ಮಾಡಿದ ಪ್ರಕ್ರಿಯೆಯಲ್ಲಿ ದೀಪಿಕಾ ಯಶಸ್ವಿಯಾಗಿದ್ದಾರೆ.

‘ಸೆಕ್ಸಿ’ ಎಂಬ ಪದ ವಿವಿಧ ವರ್ಗದ ಜನರಿಗೆ ವಿವಿಧ ರೀತಿಯ ಆರ್ಥವನ್ನು ನೀಡುತ್ತದೆ. ನನ್ನ ಪ್ರಕಾರ ‘ಸೆಕ್ಸಿ’ ಎಂದರೇ ಅದು ಕೇವಲ ದೈಹಿಕವಾಗಿ ಸುಂದರವಾಗಿರುವುದಲ್ಲ, ಅದು ವಿಶ್ವಾಸಾರ್ಹತೆ, ಮುಗ್ಧತೆಯನ್ನು ತೋರ್ಪಡಿಸುವುದಾಗಿದೆ ಎಂದು ದೀಪಿಕಾ ಪಡುಕೋಣೆ ತಿಳಿಸಿದ್ದಾರೆ.

ಪ್ರಿಯಾಂಕ ಚೋಪ್ರಾ ಸತತ ನಾಲ್ಕು ಬಾರಿ ‘ಏಷ್ಯಾದ ಮಾದಕ ಮಹಿಳೆ’ ಪಟ್ಟ ಅಲಂಕರಿಸಿದ್ದರು. ಆಗ್ರ ಹತ್ತು ಸ್ಥಾನಗಳ ಪೈಕಿ ದೀಪಿಕಾ ಪಡುಕೋಣೆ, ನಂತರ ಪ್ರಿಯಾಂಕ ಚೋಪ್ರಾ, ನಿಯಾ ಶರ್ಮಾ, ಡಾರ್ಸತಿ ಧಮ್ಮಿ, ಐದನೇ ಸ್ಥಾನದಲ್ಲಿ ಅಲಿಯಾ ಭಟ್‌ ಕಾಣಿಸಿಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಮಂದಿ ಮಾಡಿರುವ ವೋಟ್‌ಗಳನ್ನು ಆಧಾರಿಸಿ ದೀಪಿಕಾ ಅವರನ್ನು 2016 ನೇ ಸಾಲಿನ ‘ಏಷ್ಯಾದ ಮಾದಕ ಮಹಿಳೆ’ ಎಂದು ಘೋಷಿಸಲಾಗಿದೆ.

Comments are closed.