ಮುಂಬೈ: ಕೆಲ ದಿನಗಳಿಂದ ಹಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಚೋಪ್ರಾ ಶೀಘ್ರವೇ ಬಾಲಿವುಡ್ಗೆ ಮರಳುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಪ್ರಿಯಾಂಕ ಲಾಸ್ ಏಂಜಲೀಸ್ನಲ್ಲಿ ನೆಲಿಸಿದ್ದು, ಅಮೆರಿಕದ ಪ್ರಸಿದ್ಧ ಧಾರಾವಾಹಿ ‘ಕ್ವಾಟಿಗೋ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಹಿಂದಿ ಚಿತ್ರಗಳಿಂದ ದೂರ ಉಳಿದಿರುವ ಬಗ್ಗೆ ತಮ್ಮ ಅನಿಸಿಕೆ ಕೇಳಿದ ಅಭಿಮಾನಿಯೊಬ್ಬರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ, ಬಾಲಿವುಡ್ಗೆ ಶೀಘ್ರವೇ ಮರಳುವುದಾಗಿ ಉತ್ತರಿಸಿದ್ದಾರೆ.
34 ವರ್ಷದ ಬಾಲಿವುಡ್ ನಟಿ ಪ್ರಿಯಾಂಕ ಅವರು ತಮ್ಮ ಮೊದಲ ಹಾಲಿವುಡ್ ಚಿತ್ರ ‘ಬೇವಾಚ್’ಗೆ ಇತ್ತಿಚಿಗಷ್ಟೆ ಸಹಿ ಮಾಡಿದ್ದು, ಡ್ವೇನ್ ಜಾನ್ಸನ್ ಹಾಗೂ ಝೆಕ್ ಎಫ್ರನ್ ಅವರ ಜತೆ ಪ್ರಿಯಾಂಕ ನಟಿಸಲಿದ್ದಾರೆ. ಈ ವಿಷಯವನ್ನು ಚಿತ್ರಕಥೆ ಬರೆದಿರುವ ಡಾಮಿಯನ್ ಶಾನನ್ ಹಾಗೂ ಮಾರ್ಕ್ ಸ್ವಿಫ್ಟ್ ಅವರು ಖಚಿತಪಡಿಸಿದ್ದಾರೆ.
Comments are closed.