ಬಾಲಿವುಡ್ನ ತಾರಾ ಜೋಡಿಯಾದ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ತಿಂಗಳಾಂತ್ಯದಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿರುವ ಬಾಲಿವುಡ್ನ ತಾರಾ ಜೋಡಿಗಳಾದ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ಖಾನ್ ದಂಪತಿ ಮಗುವಿಗೆ ಯಾವುದು ಬೇಕು ಎನ್ನುವ ಖರೀದಿಯಲ್ಲಿ ತೊಡಗಿದ್ದಾರೆ. ಒಂದರ್ಥದಲ್ಲಿ ಮಗು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲೆಸುವ ಕಾಯಕದಲ್ಲಿ ಈ ಜೋಡಿ ನಿರತವಾಗಿದೆ. ಕರೀನಾಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಂಡತಿಯ ಸಲಹೆ ಮೇರೆಗೆ ಸೈಫ್ ಮಗುವಿಗಾಗಿ ದುಬಾರಿ ಉಡುಗೊರೆಗಳ
ಸದ್ಯ ಬೆಬೋಗೆ ಎಂಟು ತಿಂಗಳು. ಹುಟ್ಟುವ ಮುಗುವಿನ ಲಾಲನೆ ಪಾಲನೆಯಿಂದ, ಆಟದ ಸಾಮಗ್ರಿಗಳು ಸೇರಿದಂತೆ, ಹಲವು ವಿಷಯಗಳ ಕುರಿತಂತೆ ಸೈಫ್ ಅಲಿಖಾನ್ ಏನೆಲ್ಲಾ ಬೇಕು, ಯಾವುದೆಲ್ಲಾ ಬೇಡ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮಗು ಜನಿಸಲಿಕ್ಕೆ ಇನ್ನೂ ಒಂದು ತಿಂಗಳು ಬೇಕಾಗಿರುವುದರಿಂದ, ಹುಟ್ಟುವ ಮಗುವಿಗೆ ದುಬಾರಿ ಉಡುಗೊರೆ ನೀಡಲು ಸಿದ್ಧವಾಗಿದ್ದಾರೆ. ಒಂದರ್ಥದಲ್ಲಿ ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲೆಸಿದ್ದಾರೆ.
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಮುಂಬೈನಲ್ಲಿ ನೆಲೆಸಿದ್ದಾರೆ. ಕರೀನಾ ತುಂಬು ಬಸುರಿಯಾಗಿರುವ ಹಿನ್ನೆಲೆಯಲ್ಲಿ ಕರೀನಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಲು ಆಗುವುದಿಲ್ಲ. ಹೀಗಾಗಿ ಮಗುವಿಗೆ ಯಾವುದು ಬೇಕು, ಯಾವುದು ಬೇಡ ಎನ್ನುವ ಆಯ್ಕೆ ಸಂಪೂರ್ಣ ಸೈಫ್ ಅಲಿಖಾನ್ ಅವರದೆ.
ಮಗುವಿನ ಲಾಲನೆ ಪಾಲನೆ ಮಾಡಲು ದೆಹಲಿ ಮೂಲದ ಮಕ್ಕಳ ಆರೈಕೆ ಮಾಡುವ ಸಂಸ್ಥೆಯ ಅಗತ್ಯ ಸಲಹೆ ಮತ್ತು ಸಹಕಾರ ಪಡೆಯುತ್ತಿದ್ದಾರೆ. ಸೈಫ್ ಅಲಿಖಾನ್ ಚಿತ್ರೀಕರಣಕ್ಕಾಗಿ ಅಮೇರಿಕಾ ಸೇರಿದಂತೆ, ವಿವಿಧ ದೇಶಗಳಿಗೆ ಹೋದರೆ ಅಲ್ಲಿ ಏನೆಲ್ಲಾ ಇಷ್ಟವಾಗಲಿದೆ ಅದನ್ನೆಲ್ಲಾ ಸೈಫ್ ಹೊತ್ತು ತರುತ್ತಿದ್ದಾನಂತೆ.
ಮುದ್ದಿನ ಕಂದನಿಗಾಗಿ ಆಯ್ಕೆ ಮಾಡುವ ಪ್ರತಿಯೊಂದು ವಸ್ತುವಿನ ಬಗ್ಗೆ ಮುಂಬೈನಲ್ಲಿರುವ ಕರೀನಾ ಸಲಹೆ ಮತ್ತು ಸೂಚನೆ ಮೇರೆಗೆ ಖರೀದಿ ಮಾಡುತ್ತಿದ್ದಾರೆ. ಮಗುವಿಗೆ ಯಾವುದನ್ನು ಕೊಂಡುಕೊಳ್ಳಬೇಕು ಎನ್ನುವ ಬಗ್ಗೆ ಪತ್ನಿಗೆ ಪೋಟೋಗಳನ್ನು ಕಳುಹಿಸಿ ಆಕೆ ಆಯ್ಕೆ ಮಾಡಿದ ವಸ್ತುಗಳನ್ನು ಖರೀದಿಸಿ ತರುತ್ತಿದ್ದಾರೆ.
ಸೈಫ್ ಅಲಿಖಾನ್ಗೆ ಇದು ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಹೆಂಡತಿ ಹಾಗೂ ಬಾಲಿವುಡ್ ನಟಿ ಅಮೃತ ಸಿಂಗ್ಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಸಾರ ಮತ್ತು ಪುತ್ರ ಇಬ್ರಾಹಿಂ ಇದ್ದಾರೆ. ಇನ್ನು ಕರೀನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಯಾವುದೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳದೆ ಮಗು ಜನಿಸುವವರೆಗೂ ಹೆಂಡತಿ ಕರೀನಾ ಜೊತೆಗಿರಲು ಸೈಫ್ ನಿರ್ಧರಿಸಿದ್ದಾರೆ. ಅದಕ್ಕಾಗಿ ಚಿತ್ರೀಕರಣದ ಹಂತದಲ್ಲಿರುವ ಚಿತ್ರಗಳ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮನವೊಲಿಸುವಲ್ಲಿಯೂ ಸೈಫ್ ಸಫಲರಾಗಿದ್ದಾರೆ.
ಸೈಫ್ ಅಲಿಖಾನ್ನ ಮೊದಲ ಹೆಂಡತಿಗೆ ಜನಿಸಿದ ಇಬ್ಬರು ಮಕ್ಕಳ ಲಾಲನೆ ಪಾಲನೆಗೆ ನೀಡಿದ ಒತ್ತಿಗಿಂತ ಹೆಚ್ಚಿನ ಒತ್ತನ್ನು ಕರೀನಾಗೆ ಹುಟ್ಟುವ ಮಗುವಿಗೆ ಆದ್ಯತೆ ನೀಡುತ್ತಿದ್ದಾರೆ.
ತಿಂಗಳಾಂತ್ಯದಲ್ಲಿ ಮನೆಗೆ ಹೊಸದಾಗಿ ಬರುವ ಅತಿಥಿಯನ್ನು ಸ್ವಾಗತಿಸಲು ಸೈಫ್ ಅಲಿಖಾನ್ ಮತ್ತು ಕರೀನಾ ಖಾನ್ ದಂಪತಿ ಅಗತ್ಯ ಸಿದ್ಧತೆ ಮತ್ತು ಮಗುವಿನ ಆರೈಕೆಗೆ ಬೇಕಾಗುವ ಸಾಮಗ್ರಿಗಳ ಖರೀದಿಯಲ್ಲಿ ತಲ್ಲೀನರಾಗಿದ್ದಾರೆ.