ಮನೋರಂಜನೆ

ಮಾಸ್ತಿಗುಡಿ ನಿರ್ದೇಶಕ, ನಿರ್ಮಾಪಕರ ಜಾಮೀನು ಅರ್ಜಿ ವಜಾ

Pinterest LinkedIn Tumblr

mastigudi-shooting_760x400ರಾಮನಗರ: ‘ಮಾಸ್ತಿಗುಡಿ’ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಇಬ್ಬರು ಕಲಾವಿದರು ಸಾವನಪ್ಪಿದ ಪ್ರಕರಣದ ಆರೋಪಿಗಳಾದ ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಗೌಡ, ಸಾಹಸ ನಿರ್ದೇಶಕ ರವಿವರ್ಮಾ ಹಾಗೂ ಯುನಿಟ್ ವ್ಯವಸ್ಥಾಪಕ ಭರತ್ ಅವರ ಜಾಮೀನು ಅರ್ಜಿಯನ್ನು ರಾಮನಗರ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ಸಹ ನಿರ್ದೇಶಕ ಸಿದ್ದು ಅವರಿಗೆ ಜಾಮೀನು ನೀಡಿದೆ. ಪ್ರಕರಣದ ಐವರು ಆರೋಪಿಗಳ ಪೈಕಿ ಸಹ ನಿರ್ದೇಶಕ ಸಿದ್ದು ಮೂರನೇ ಆರೋಪಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ನಿರ್ದೇಶಕ ಮೇಲ್ನೋಟಕ್ಕೆ ಆರೋಪಿಯಾಗಿ ಕಂಡರೂ, ಇದರಲ್ಲಿ ಸಹ ನಿರ್ದೇಶಕರಿಗಿಂತ ನಿರ್ದೇಶಕರ ಪಾತ್ರ ಮುಖ್ಯವಾದುದು ಎಂದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

ಪ್ರಕರಣದ ಉಳಿದ ಆರೋಪಿಗಳಾದ ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಗೌಡ, ಸಾಹಸ ನಿರ್ದೇಶಕ ರವಿವರ್ಮಾ ಹಾಗೂ ಯುನಿಟ್ ವ್ಯವಸ್ಥಾಪಕ ಭರತ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿತು. ಈ ಆರೋಪಿಗಳಿಗೆ ಈಗಾಗಲೇ ನ್ಯಾಯಾಲಯವು ಡಿ.3ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಚಿತ್ರೀಕರಣ ಸಂದರ್ಭ ಖಳನಟರಾದ ಅನಿಲ್‌ ಹಾಗೂ ಉದಯ್‌ ರಾಘವನ್‌ ಅವರು ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಜಿಗಿದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಕುರಿತು ತಾವರೆಕರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments are closed.