ಈಗ ರಣವೀರಿ ಸಿಂಗ್ ಸುದ್ದಿಯಲ್ಲಿದ್ದಾರೆ. ಅವರು ಮಾಡಿರುವ ಕಾರ್ಯ ಎಲ್ಲರನ್ನು ನಿಬ್ಬೆರೆಗುಗೊಳಿಸಬಹುದು….ಬಾಲಿವುಡ್‌ನ ಇಮ್ರಾನ್ ಹಶ್ಮಿಯನ್ನೂ ನಾಚಿಸುವ ಸಾಹಸವಿದು! ಹೀಗೆ ಕಿಸ್ಸರ್‌ಬಾಯ್‌ನನ್ನು ಮೀರಿಸಿರುವ ರಣವೀರ್ ಸಿಂಗ್, ಒಂದೇ ಸಿನಿಮಾದಲ್ಲಿ ಅವರು ನಾಯಕಿಗೆ 40 ಮುತ್ತುಗಳನ್ನು ಕೊಟ್ಟಿದ್ದಾರೆ! ರಣವೀರ್ ಹೀಗೆ ಮಧುರವಾಗಿ ಚುಂಬಿಸಿರುವುದು ನಟಿ ವಾಣಿ ಕಪೂರ್‌ಗೆ. ಆ ಚಿತ್ರದ ಹೆಸರು ‘ಬೆಫಿಕ್ರ್’. ಅದಿತ್ಯಾ ಚೋಪ್ರಾ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ವಾಣಿ ಕಪೂರ್ ಹಾಗೂ ರಣವೀರ್ ಸಿಂಗ್ 40 ಸಲ ಚುಂಬಿಸಿಕೊಂಡರೂ ಸೆನ್ಸಾರ್ ಮಂಡಳಿಯ ಕಣ್ಣಿಗೆ ಇದು ಬಿದ್ದಿಲ್ಲ! ಸೆನ್ಸಾರ್ ಮಂಡಳಿ ಇದಕ್ಕೆ ಕಣ್ಮುಚ್ಚಿಕೊಂಡು ಯಾವುದೇ ಕಟ್ ಇಲ್ಲದೆ ‘ಯು/ಎ’ ಸರ್ಟಿಪಿಕೆಟ್ ನೀಡಿದೆ!
ಈ ಹಿಂದೆ ಜೇಮ್ಸ್‌ಬಾಂಡ್ ಚಿತ್ರ ‘ಸ್ಪೆಕ್ಟರ್’ ಬರೋವಾಗ ಸೆನ್ಸಾರ್ ಮಂಡಳಿ ಇದೇ ಮುತ್ತಿನ ಬಲೆಗೆ ಸಿಲುಕಿತ್ತು. ಚಿತ್ರದಲ್ಲಿ ಮೂರು ಮುತ್ತಿನ ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಸಂಸ್ಕಾರಿ ಬಾಂಡ್ ಹ್ಯಾಶ್‌ಟ್ಯಾಗ್‌ನಲ್ಲಿ ಅದು ಭಾರಿ ತಮಾಷೆಗೆ ಕಾರಣವಾಗಿತ್ತು. ಈಗ ಅದೇ ಸೆನ್ಸಾರ್ ಮಂಡಳಿ ‘ಬೆಫಿಕ್ರ್’ಗೆ ಆಶೀರ್ವಾದ ಮಾಡಿರೋದು ಚರ್ಚೆಗೆ ಕಾರಣವಾಗಿದೆ. ಆದರೆ, ಎಂಥದ್ದೇ ರೊಮ್ಯಾಂಟಿಕ್ ದೃಶ್ಯಗಳನ್ನೂ ಆದಿತ್ಯಾ ಚೋಪ್ರಾ ತುಂಬಾ ಕಲಾತ್ಮಕವಾಗಿಯೇ ಚಿತ್ರೀಕರಿಸುತ್ತಾರೆಂಬುದು ಹಲವರ ನಂಬಿಕೆ. ಅದಕ್ಕೆ ಸಾಕ್ಷಿ ‘ದಿಲ್ವಾಲೆ ದುಲ್ಹಾನಿಯ ಲೇ ಜಾಯೇಂಗೆ’ ಚಿತ್ರ. ಹೀಗಾಗಿ ‘ಬೆಫಿಕ್ರ್’ ಕೂಡ ಸೆನ್ಸಾರ್ ಮಂಡಳಿಗೆ ಹಾಗೆಯೇ ಅನ್ನಿಸಿತಾ? ಗೊತ್ತಿಲ್ಲ!