ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಐತಿಹಾಸಿಕ ಕಥೆಯುಳ್ಳ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ರಾಜಸ್ತಾನಿ ಘೂಮರ್ ನೃತ್ಯದ ಮೂಲಕ ಚಿತ್ರೀಕರಣ ಆರಂಭಿಸಲಿದ್ದಾರೆ ಅಂತ ಹೇಳಲಾಗಿದೆ.
ಬಾಲಿವುಡ್‍ನ ಯಶಸ್ವಿ ನಿರ್ದೇಶಕ ಸಂಜಯ ಲೀಲಾ ಬನ್ಸಾಲಿಯ ಮೂರನೇ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ರಾಮ್‍ಲೀಲಾ ಮತ್ತು ಬಾಜೀರಾವ್ ಮಸ್ತಾನಿ ಚಿತ್ರಗಳ ಯಶಸ್ಸಿನ ನಂತರ ಬನ್ಸಾಲಿ ಪದ್ಮಾವತಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ನಾಯಕಿ ಪ್ರಧಾನವಾದ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಜೊತೆಯಾಗಿ ರಾಜಾ ರತನ್ ಸಿಂಗ್ ಪಾತ್ರದಲ್ಲಿ ಶಾಹೀದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ನಟಿಸುತ್ತಿದ್ದಾರೆ. ರಾಮ್‍ಲೀಲಾ ಮತ್ತು ಬಾಜೀರಾವ್ ಮಸ್ತಾನಿಯಲ್ಲಿ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಕೆಮಿಸ್ಟ್ರಿ ಹಿಟ್ ಆಗಿತ್ತು.
ಮೊದಲೆರೆಡು ಸಿನಿಮಾಗಳಲ್ಲಿ ದೀಪಿಕಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ರಾಜಾ ರತನ್ ಸಿಂಗ್ ವೈಭೋಗದ ಆಡಳಿತವನ್ನು ಬೆಳ್ಳಿ ಪರದೆಯ ಮೇಲೆ ತರಲು ಸಂಜಯ್ ಲೀಲಾ ಬನ್ಸಾಲಿ ತಯಾರಿ ನಡೆಸಿದ್ದಾರೆ.