ಮನೋರಂಜನೆ

ಕೆಲವೇ ಶ್ರೀಮಂತರಿಂದ 80% ಸಾಮಾನ್ಯರಿಗೆ ತೊಂದರೆ: ತಮಿಳು ನಟ ವಿಜಯ್

Pinterest LinkedIn Tumblr

vijayಚೆನ್ನೈ: ೫೦೦ ಮತ್ತು ೧೦೦೦ ರೂ ನೋಟುಗಳ ಹಿಂಪಡೆಯುವ ಕೇಂದ್ರ ಸರ್ಕಾರದ ನಡೆ ‘ದಿಟ್ಟತನದಿಂದ’ ಕೂಡಿದೆ ಆದರೆ ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಗಳಾಗಿವೆ ಎಂದಿರುವ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್, ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ಇದನ್ನು ನಿವಾರಿಸಬಹುದಿತ್ತು ಎಂದಿದ್ದಾರೆ.
“ಕೆಲವು ಸಿರಿವಂತರು ಮಾಡಿರುವ ತಪ್ಪಿನಿಂದ ೮೦% ಸಾಮಾನ್ಯ ಜನಕ್ಕೆ ತೊಂದರೆಯಾಗಿದೆ” ಎಂದು ಸಿರಿವಂತರ ಕಪ್ಪು ಹಣದ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.
“ಕೇಂದ್ರ ಸರ್ಕಾರದ ನಡೆ ಒಳ್ಳೆಯದು. ದಿಟ್ಟತನದಿಂದ ಕೂಡಿದೆ. ಇದು ಬೇಕಾಗಿತ್ತು ಮತ್ತು ಇದನ್ನು ಸ್ವಾಗತಿಸುತ್ತೇನೆ. ದೇಶದ ಆರ್ಥಿಕತೆ ಉತ್ತಮವಾಗುವುದರಲ್ಲಿ ಸಂಶಯವಿಲ್ಲ” ಎಂದು ಕೂಡ ನಟ ವರದಿಗಾರರಿಗೆ ಹೇಳಿದ್ದಾರೆ.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಮತ್ತು ಔಷಧಿಗಳನ್ನು ಕೊಳ್ಳಲು ಉಂಟಾಗುತ್ತಿರುವ ಸಂಕಷ್ಟವನ್ನು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿವಾರಿಸಬಹುದಿತ್ತು ಎಂದು ಕೂಡ ಅವರು ಹೇಳಿದ್ದಾರೆ.
“ಚಿತ್ರಮಂದಿರಗಳಿಗೆ, ಮಾಲ್ ಗಳಿಗೆ ಮತ್ತು ಸಾಮಾನ್ಯ ವ್ಯವಹಾರಕ್ಕೆ ಜನ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಬಳಸುತ್ತಿದ್ದರು. ಈಗ ಇಂತಹ ಜನಕ್ಕೆ ಅನಗತ್ಯವಾಗಿ ತೊಂದರೆಯಾಗಿದೆ” ಎಂದು ಕೂಡ ಅವರು ಹೇಳಿದ್ದಾರೆ.
ಸರತಿಯಲ್ಲಿ ಕಾಯುವಾಗ ಹಿರಿಯ ಮಹಿಳೆ ಮೃತಪಟ್ಟಿರುವುದು ಮತ್ತು ಆಸ್ಪತ್ರೆಯಲ್ಲಿ ಹಳೆಯ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಮಗುವೊಂದು ಮೃತಪಟ್ಟ ವರದಿಗಳ ಬಗ್ಗೆ ಕೂಡ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಸಿರಿವಂತರು ೨೦% ಇರಬಹುದು. ಅವರಲ್ಲಿ ಸ್ವಲ್ಪ ಜನ ತಪ್ಪೆಸಗಿರಬಹುದು ಆದರೆ ಉಳಿದವರ ತಪ್ಪೇನು?” ಎಂದು ಕೂಡ ವಿಜಯ್ ಪ್ರಶ್ನಿಸಿದ್ದಾರೆ.
ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರು, ಗ್ರಾಮಸ್ಥರು ಮತ್ತು ಹಿರಿಯ ನಾಗರಿಕರು ಇನ್ನು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಹೆಣಗಾಡುತ್ತಿದ್ದು, ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಒಳ್ಳೆಯದು ಎಂದು ಕೂಡ ಅವರು ಹೇಳಿದ್ದಾರೆ.

Comments are closed.