ಬೆಂಗಳೂರು : ಮಾಸ್ತಿಗುಡಿ ದುರಂತದ ಬಳಿಕ ಕಂಗಾಲಾಗಿರುವ ನಟ ದುನಿಯಾ ವಿಜಯ್ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ’ನ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಂದರ್ ಮಾವ ಆರೋಪಿಸಿದ್ದಾರೆ.
ಸುಂದರ್ ಅವರ ಅಣ್ಣ ಶಂಕರ್ ಪತ್ನಿಯ ತಂದೆ ಜಯರಾಮ್ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದೀಗ ಅವರು ಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಗಳಿಗೆ ಕಿರುಕುಳ ನೀಡಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಹೀಗಾಗಿ ಚೆನ್ನಮ್ಮನ ಅಚ್ಚಕಟ್ಟು ಪ್ರದೇಶದಲ್ಲಿರುವ ಮಗಳ ಮನೆಗೆ ತೆರಳಿದಾಗ ಅಲ್ಲಿದ್ದ ವಿಜಯ ನಮ್ಮ ಕುಟುಂಬದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಕೆನ್ನೆಗೆ ಮತ್ತು ಮುಖಕ್ಕೆ ಹೊಡೆದಿದ್ದಾರೆ ಎಂದು ಜಯರಾಮ್ ಕುಟುಂಬಸ್ಥರು ಆರೋಪಿಸಿದ್ದಾರೆ.