ಮನೋರಂಜನೆ

‘ಮುಂದಿನ ವರ್ಷದಿಂದ ಡಾ. ರಾಜ್‌ಕುಮಾರ್‌ ಜನ್ಮ ದಿನದಂದೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ’

Pinterest LinkedIn Tumblr

sid

ಬೆಂಗಳೂರು: ಮೇರುನಟ ಡಾ.ರಾಜ್‌ಕುಮಾರ್‌ ಜನ್ಮದಿನವಾದ ಏಪ್ರಿಲ್ 24ರಂದು ಸಮಾರಂಭ ಆಯೋಜಿಸಿ ಅಂದೇ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಜಿಕೆವಿಕೆಯಲ್ಲಿನ ಡಾ.ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ರವಿವಾರ ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ 2014 ಮತ್ತು 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದ ಅವರು, ಎರಡು ವರ್ಷಗಳ ಪ್ರಶಸ್ತಿಯನ್ನು ಒಮ್ಮೆ ನೀಡುವುದರಿಂದ ಸಮಯ ವ್ಯರ್ಥವಾಗಲಿದೆ. ಹೀಗಾಗಿ ಮುಂದಿನ ವರ್ಷದಿಂದ ಆಯಾ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅದೇ ವರ್ಷ ನೀಡಲು ತೀರ್ಮಾನಿಸಲಾಗಿದೆ ಎಂದರು.

2014ನೇ ಸಾಲಿನಲ್ಲಿ ಅತ್ಯುತ್ತಮ ಚಿತ್ರ ‘ಹರಿವು’, ಅತ್ಯುತ್ತಮ ನಟ ಸಂಚಾರಿ ವಿಜಯ್‌, ಅತ್ಯುತ್ತಮ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಹಾಗೂ 2015ನೇ ಸಾಲಿನಲ್ಲಿ ಅತ್ಯುತ್ತಮ ಚಿತ್ರ ‘ತಿಥಿ’, ಅತ್ಯುತ್ತಮ ನಟ ವಿಜಯ ರಾಘವೇಂದ್ರ, ಅತ್ಯುತ್ತಮ ನಟಿ ಮಾಲಾಶ್ರೀ ಸೇರಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜೀವಿತಾವಧಿ ಸಾಧನೆಗಾಗಿ 2014 ರಲ್ಲಿ ಬಸಂತಕುಮಾರ್‌ ಪಾಟೀಲ್‌, ಡಾ. ಬರಗೂರು ರಾಮಚಂದ್ರಪ್ಪ, ಸುರೇಶ್‌ ಅರಸ್‌ ಹಾಗೂ 2015ನೇ ಸಾಲಿನಲ್ಲಿ ಹರಿಣಿ, ನಾಗತಿಹಳ್ಳಿ ಚಂದ್ರಶೇಖರ್‌ ಮತ್ತು ರಾಜನ್‌ ಅವರಿಗೆ ಪುಟ್ಟಣ ಕಣಗಾಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

Comments are closed.