ಅಂತರಾಷ್ಟ್ರೀಯ

ಫೆಲ್ಪ್ಸ್ 23ನೆ ಚಿನ್ನ ಪದಕದೊಂದಿಗೆ ಜಲಕ್ರೀಡೆಗೆ ತೆರೆ

Pinterest LinkedIn Tumblr

Gold

ರಿಯೋ ಡಿ ಜನೈರೋ: ಒಲಿಂಪಿಕ್ ಕ್ರೀಡಾಕೂಟದ ಬಂಗಾರದ ಮನುಷ್ಯ ಮೈಕೆಲ್ ಫೆಲ್ಪ್ಸ್ ನಿನ್ನೆ ರಾತ್ರಿ ತಮ್ಮ 23ನೆ ಚಿನ್ನದ ಪದಕ ಗೆಲ್ಲುವುದರೊಂದಿಗೆ ತಮ್ಮ ಜಲಕ್ರೀಡೆಗೆ ಅಂತಿಮ ತೆರೆ ಎಳೆದಿದ್ದಾರೆ.

ಫೆಲ್ಪ್ಸ್ 23 ಚಿನ್ನದ ಪದಕಗಳೊಂದಿಗೆ ಒಟ್ಟು 28 ಮೆಡಲ್‍ಗಳನ್ನು ಕೊರಳಿಗೇರಿಸಿದಂತಾಗಿದೆ. ರಿಯೋದಲ್ಲಿ ನಿನ್ನೆ ನಡೆದ ತಮ್ಮ ಅಂತಿಮ 4×100 ಮೀಟರ್ ಮಿಡ್ಲೆ ರಿಲೆಯ ಬಟರ್ ಫ್ಲೈ ಲೆಗ್‍ನಲ್ಲಿ ಫೆಲ್ಪ್ಸ್ ಒಳಗೊಂಡ ಅಮೆರಿಕ ತಂಡ ಗೆಲುವು ಸಾಧಿಸಿತು.

ಇದರೊಂದಿಗೆ ಈ ಒಲಿಂಪಿಕ್ಸ್‍ನಲ್ಲಿ 5ನೆ ಸ್ವರ್ಣ ಪದಕಗಳನ್ನು ಮತ್ಸ್ಯ ಮಾನವ ಗೆದ್ದಂತಾಗಿದೆ. ಇದಲ್ಲದೆ, ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಐದು ರಜತ ಪದಕಗಳನ್ನೂ ಗೆದ್ದುಕೊಂಡಿದ್ದಾರೆ. ಈ ಈಜು ಕ್ರೀಡೆಯೊಂದಿಗೆ ತಮ್ಮ ಒಲಿಂಪಿಕ್ ಅಭಿಯಾನವನ್ನು ನೂತನ ವಿಶ್ವದಾಖಲೆಗಳೊಂದಿಗೆ ಫೆಲ್ಪ್ಸ್ ಅಂತ್ಯಗೊಳಿಸಿದ್ದಾರೆ.

Comments are closed.