ನವದೆಹಲಿ: ”ಕೇರಳಿಗರೇ ನಿಜವಾದ ಭಾರತೀಯರು” ಎಂದು ಸುಪ್ರೀಂ ಕೋರ್ಟ್‍ನ ಮಾಜಿ ಮುಖ್ಯನ್ಯಾಯಮೂರ್ತಿ, ಭಾರತೀಯ ಪತ್ರಿಕಾ ಮಂಡಳಿ ಮಾಜಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ತಮ್ಮ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ.
ಸಾಕ್ಷರತೆಯಲ್ಲಿ ಮುಂದಿರುವ ಹೆಗ್ಗಳಿಕೆ ಹೊಂದಿರುವ ಕೇರಳಿಗರು ಸರ್ವೋತ್ಕೃಷ್ಟ ಗುಣಗಳನ್ನು ಹೊಂದಿದ್ದು ಒಗ್ಗಟ್ಟು ಮತ್ತು ಸಾಮರಸ್ಯದಿಂದ ಬಾಳುತ್ತ ನಿಜವಾದ ಭಾರತೀಯರೆನಿಸಿಕೊಳ್ಳಲು ಅರ್ಹರೆನಿಸಿಕೊಂಡಿದ್ದಾರೆ ಎಂದು ಕಾಟ್ಜು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.
ಕೇರಳದಲ್ಲಿ ವಿಭಿನ್ನ ಮತ, ಜನಾಂಗಗಳ ಜನರು ವಾಸಿಸುತ್ತಿದ್ದು ಬಾಹ್ಯ ಪ್ರಭಾವ ಮುಕ್ತತೆ ಹೊಂದಿದ್ದಾರೆ. ಭಾರತದ ಉಳಿದ ಭಾಗಗಳ ಜನರು ಸಹ ಅವರನ್ನು”ಅನುಕರಿಸಲು” ಪ್ರಯತ್ನಿಸಬೇಕು ಎಂದು ಕಾಟ್ಜು ಸಲಹೆ ನೀಡಿದ್ದಾರೆ.
Comments are closed.