ನವದೆಹಲಿ: ಭಾರತದ ಸೀಮಿತ ಓವರುಗಳ ನಾಯಕ ಎಂ.ಎಸ್.ಧೋನಿ ತಮ್ಮ ಆತ್ಮಕಥನದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದ ಜತೆ ಸಂವಾದ ನಡೆಸದೇ ದಿಢೀರನೇ ನಿರ್ಗಮಿಸಿದ ಘಟನೆ ಸಂಭವಿಸಿದೆ. ಮಹಿ ನಿರ್ಗಮನದಿಂದ ಕಸಿವಿಸಿಗೊಳಗಾದ ಪತ್ರಕರ್ತರು ಚಿತ್ರದ ನಿರ್ದೇಶಕ ನೀರಜ್ ಪಾಂಡೆಯನ್ನು ಮಹಿ ಮಾಧ್ಯಮದ ಜತೆ ಸಂವಾದ ನಡೆಸದೇ ನಿರ್ಗಮಿಸಿದ್ದೇಕೆಂದು ಕೇಳಿದರು.
ಧೋನಿಗೆ ಅವರದ್ದೇ ಆದ ಆಯ್ಕೆಗಳಿವೆ. ಅದಕ್ಕೆ ಕಾರಣವೇನೆಂದು ನನಗೆ ಗೊತ್ತಿಲ್ಲ. ನೀವು ಈ ಪ್ರಶ್ನೆಯನ್ನು ನನಗೆ ಕೇಳಿದರೆ ಉಪಯೋಗವಿಲ್ಲ ಎಂದೂ ಹೇಳಿದರು. ಅದನ್ನು ನನಗೆ ತಿಳಿಸಿದ್ದರಿಂದ ನಾನು ಅವರ ಪರವಾಗಿ ಕ್ಷಮೆ ಕೇಳುತ್ತೇನೆ ಎಂದೂ ಅವರು ಸೇರಿಸಿದರು.
ಧೋನಿ ಅಭಿಮಾನಿಗಳು ಮತ್ತು ಮಾಧ್ಯಮದಿಂದ ತುಂಬಿದ್ದ ಹಾಲ್‌ನಲ್ಲಿ ಅವರು ಅಭಿಮಾನಿಗಳು ಕೇಳಿದ ಕೆಲವು ಪ್ರಶ್ನೆಗೆ ಉತ್ತರಿಸಿದರು. ಆದರೆ ಮಾಧ್ಯಮ ಅವರನ್ನು ಪ್ರಶ್ನೆಗಳನ್ನು ಕೇಳಲು ಹೊರಟ ಸಂದರ್ಭದಲ್ಲಿ ದಿಢೀರನೇ ಅವರು ನಿರ್ಗಮಿಸಿದ್ದರು.
ಎಂಎಸ್ ಧೋನಿ: ದಿ ಅನ್‌ಟೋಸ್ಡ್ ಸ್ಟೋರಿಯಲ್ಲಿ ಅನುಪಮ್ ಖೇರ್, ಭೂಮಿಕಾ ಚಾವ್ಲಾ, ರಾಜೇಶ್ ಶರ್ಮಾ ಮತ್ತು ಕಿಯಾರಾ ಅಡ್ವಾನಿ ಪಾತ್ರವಹಿಸಿದ್ದಾರೆ. ಇದು ಸೆಪ್ಟೆಂಬರ್ 30ರಂದು ಬಿಡುಗಡೆಯಾಗಲಿದೆ.
Comments are closed.