ಚೆನ್ನೈ: ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಪರಿಪೂರ್ಣ ವ್ಯಕ್ತಿಯಾಗಿದ್ದು, ಟೆಸ್ಟ್‌ನಲ್ಲಿ ದೊಡ್ಡ ತಂಡಗಳಾದ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಭಾರತವನ್ನು ವಿಜಯದತ್ತ ಮುನ್ನಡೆಸುವುದು ಅವರಿಗೆ ಅತೀ ದೊಡ್ಡ ಸವಾಲಾಗಿದೆ ಎಂದು ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಹೇಳಿದರು.
ಕುಂಬ್ಳೆ ಟೆಸ್ಟ್ ಶತಕ ಗಳಿಸಿದ್ದು, 600 ವಿಕೆಟ್ ಕಬಳಿಸಿದ್ದಾರೆ. ನಾನು ಭೇಟಿ ಮಾಡಿದ ಅತ್ಯಂತ ಸಕಾರಾತ್ಮಕ ವ್ಯಕ್ತಿ ಕುಂಬ್ಳೆ. ಅವರು ಸುಲಭವಾಗಿ ಸೋಲಪ್ಪಿಕೊಳ್ಳದೇ ಇರುವುದರಿಂದ ಯುವ ತಂಡ ಅವರಿಂದ ಸಾಕಷ್ಟು ಕಲಿಯಬಹುದು ಎಂದರು.
ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತ ಪ್ರವಾಸ ಮಾಡಿದಾಗ ಅವುಗಳನ್ನು ಸೋಲಿಸುವುದು ಕಠಿಣ ಸವಾಲಿನದ್ದಾಗಿದ್ದು, ಅವರು ಕಠಿಣ ತಂಡಗಳನ್ನು ಎದುರಿಸುವಾಗ ಹೇಗೆ ಒತ್ತಡವನ್ನು ನಿಭಾಯಿಸುತ್ತಾರೆನ್ನುವುದು ಪ್ರಶ್ನೆಯಾಗಿದೆ ಎಂದು ಸೆಹ್ವಾಗ್ ಹೇಳಿದರು. ಇಂಗ್ಲೆಂಡ್ ಈ ಕ್ಷಣದಲ್ಲಿ ಉತ್ತಮ ಕ್ರಿಕೆಟ್ ಆಡುತ್ತಿದ್ದು, ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಹಾಗೆ ಭಾರತ ಇಂಗ್ಲೆಂಡ್ ವಿರುದ್ಧ ಕೂಡ ಆಡುತ್ತದೆಂದು ಆಶಿಸಿದರು.
ನಿಮಗೆ ಬ್ಯಾಟಿಂಗ್ ಕೋಚ್ ಆಫರ್ ಮಾಡಿದರೆ ಸ್ವೀಕರಿಸುತ್ತೀರಾ ಎಂಬ ಪ್ರಶ್ನೆಗೆ, ತಮಗೆ ಸಮಯವಿಲ್ಲ. ಇದಲ್ಲದೇ ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಅಗತ್ಯವಿದೆಯೆಂದು ತಾವು ಭಾವಿಸುವುದಿಲ್ಲ ಎಂದರು.
Comments are closed.