ಬೆಂಗಳೂರು: ಸ್ಯಾಂಡಲ್‌ವುಡ್ ನಟ ಸುದೀಪ್ ತಮ್ಮ ಮುಂಬರುವ ಚಿತ್ರ ಕೋಟಿಗೊಬ್ಬ -2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕೋಟಿಗೊಬ್ಬ-2 ಚಿತ್ರ ರಿಮೇಕ್ ಅಲ್ಲ, ಇದೊಂದು ನೇರವಾಗಿರುವಂತಹ ಚಿತ್ರ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.
ಈ ಚಿತ್ರದ ಕಥೆಯನ್ನು ಶಿವಕುಮಾರ್ ಬರೆದಿದ್ದಾರೆ. ಚಿತ್ರಕ್ಕಾಗಿ ನಿರ್ದೇಶಕ ಕೆಎಸ್ ರವಿಕುಮಾರ್ ಹೆಚ್ಚು ಕೆಲಸ ಮಾಡಿದ್ದಾರೆ. ಅದಕ್ಕಾಗಿ ಕೋಟಿಗೊಬ್ಬ-2 ಚಿತ್ರ ರಿಮೇಕ್ ಮಾಡಲಾಗಿಲ್ಲ. ಇದೊಂದು ನೇರವಾಗಿರುವಂತಹ ಚಿತ್ರ ಎಂದು ಸುದೀಪ್ ಅಭಿಪ್ರಾಯಪಟ್ಟರು.
ಚಿತ್ರದ ಆಡಿಯೋವನ್ನು ಚೆನ್ನೈನಲ್ಲಿ ಯಾಕೆ ರಿಲೀಸ್ ಮಾಡಲಾಗಿದೆ.ಆದ್ರೆ ಕರ್ನಾಟಕದಲ್ಲಿ ಯಾಕೆ ಲಾಂಚ್ ಮಾಡಲಾಗಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು,
ದ್ವಿಭಾಷೆಯಲ್ಲಿ ಚಿತ್ರವನ್ನು ಶೂಟ್ ಮಾಡುತ್ತಿರುವುದರ ಬಗ್ಗೆ ಎಲ್ಲಾ ಜನರಿಗೆ ಗೊತ್ತಾಗಬೇಕು. ಆದ್ರೆ ಈ ಚಿತ್ರವನ್ನು ಡಬ್ ಮಾಡಲಾಗಿಲ್ಲ. ಆದಕಾರಣದಿಂದ ನಾವು ಆಡಿಯೋವನ್ನು ಚೆನ್ನೈನಲ್ಲಿ ರಿಲೀಸ್ ಮಾಡಿದ್ದೇವೆ. ಆದ್ದರಿಂದ ಕೋಟಿಗೊಬ್ಬ-2 ಚಿತ್ರವನ್ನು ಡಬ್ ಮಾಡಲಾಗಿಲ್ಲ ಎಂದು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು.
Comments are closed.