ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರ್ಟೂನ್ ಅನಿಮೇಟೆಡ್ ಚಿತ್ರಕ್ಕೆ ಕಂಠ ನೀಡಲಿದ್ದಾರೆ. ಈ ಮೊದಲು ಭಜರಂಗಿ ಭಾಯ್ ಜಾನ್ ಚಿತ್ರದ ಮೂಲಕ ಹಿಂಧು ಆರಾಧ್ಯ ಭಕ್ತನಾಗಿ ಕಾಣಿಸಿಕೊಂಡಿದ್ದ ಸಲ್ಮಾನ್, ಇದೀಗ ಮತ್ತೊಂದು ಬಾರಿ ಧ್ವನಿ ನೀಡಲಿದ್ದಾರೆ.
ಮಕ್ಕಳಿಗೆ ಅರ್ಥವಾಗೋ ರೀತಿಯಲ್ಲಿ ಧ್ವನಿ ನೀಡುವುದಕ್ಕಾಗಿ ಸಲ್ಮಾನ್ ಖಾನ್ ಧ್ವನಿಯನ್ನು ಬಳಸಿಕೊಳ್ಳಲಾಗುತ್ತಿದೆ. 2ಡಿ ತಂತ್ರಜ್ಞಾನದ ಚಿತ್ರದ ಇನ್ನಿತರ ಪಾತ್ರಗಳಿಗಾಗಿ ಬಾಲಿವುಡ್ ನ ಜಾವೇದ್ ಅಖ್ತರ್, ರವೀನಾ ಟಂಡನ್, ಕುನಾಲ್ ಕಂಠ ನೀಡಲಿದ್ದಾರೆ. ಪರ್‌ಸೆಪ್ಟ್ ಚಿತ್ರದ ಬ್ಯಾನರ್ ಅಡಿ ಮಕ್ಕಳ ಮನರಂಜನೆಗಾಗಿ ಯೂಸೂಫ್ ಶೇಖ್ ನಿರ್ಮಿಸುತ್ತಿರುವ ಕಾರ್ಟೂನ್ ಮಾದರಿ ಚಿತ್ರದಲ್ಲಿ ಸಲ್ಮಾನ್ ಖಾನ್ ನೀಡುತ್ತಿದ್ದಾರೆ.
ನಿಮಗೆಲ್ಲಾ ಗೊತ್ತಿರೋ ಹಾಗೇ ಸಲ್ಮಾನ್ ಖಾನ್ ಮುಂಬರುವ ‘ಟ್ಯೂಬ್ ಲೈಟ್’ ಚಿತ್ರ ತೆರೆ ಮೇಲೆ ಬರಲು ಸಿದ್ಧತೆ ನಡೆಸುತ್ತಿದೆ. ಸಲ್ಮಾನ್ ಖಾನ್ ಹಾಗೂ ಏಕ್ತಾ ಟೈಗರ್ ಅಭಿನಯದ ‘ಟ್ಯೂಬ್ ಲೈಟ್’ ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲೂ ಟೈಟಲ್ ಹೊಂಜದಿರುವ ಈ ಚಿತ್ರ ಹಿಂದಿಯಲ್ಲಿ ಮೂಡಿ ಬರುತ್ತಿದೆ.
Comments are closed.