ಮನೋರಂಜನೆ

2017 ಏಪ್ರಿಲ್ 28ಕ್ಕೆ ಸಿಗಲಿದೆ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ? ಎಂಬ ಪ್ರಶ್ನೆಗೆ ಉತ್ತರ!

Pinterest LinkedIn Tumblr

bahuಹೈದರಾಬಾದ್: ಸಿನಿಮಾ ಪ್ರಿಯರ ಬಹು ನಿರೀಕ್ಷೆಯ ಅದ್ದೂರಿ ಐತಿಹಾಸಿಕ ಚಿತ್ರ ಬಾಹುಬಲಿ -2 ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಎಸ್ ಎಸ್ ರಾಜಮೌಲಿ ನಿರ್ದೇಶನದ ಬಾಹುಬಲಿ ಸಿನಿಮಾದ ಮೊದಲ ಭಾಗದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ? ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮನಸ್ಸಲ್ಲಿ ಉಳಿಸಿ ಎರಡನೇ ಭಾಗಕ್ಕಾಗಿ ಜನರು ಕಾಯುವಂತೆ ಮಾಡಲಾಗಿತ್ತು.

ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದರೆ 2017ರ ವರೆಗೆ ಕಾಯಲೇ ಬೇಕು ಎಂದಿದ್ದರು ರಾಜಮೌಳಿ. ಅಂದಹಾಗೆ 2017 ಏಪ್ರಿಲ್ 28 ರಂದು ಬಾಹುಬಲಿ ದ ಕನ್‍ಕ್ಲೂಶನ್ ಚಿತ್ರ ಬಿಡುಗಡೆಯಾಗಲಿದೆ. ಈ ಮೂಲಕ ಬಾಹುಬಲಿಯ ಅಂತ್ಯದ ಬಗ್ಗೆ ಇರುವ ಜನರ ಪ್ರಶ್ನೆಗೆ ಉತ್ತರ ಸಿಗಲಿದೆ.

Comments are closed.