ಫೋಟೋಗ್ರಫಿಯನ್ನು ಇಷ್ಟಪಡುವವರು ತುಂಬಾ ಜನ ಇದ್ದಾರೆ ನಮ್ಮ ನಡುವೆ. ಫೋಟೋಗ್ರಫಿ ಮಾಡಲೆಂದೇ ಬೇರೆ ಬೇರೆ ತಾಣಗಳಿಗೆ ಹೋಗುತ್ತಾರೆ. ಆದರೆ ಎಲ್ಲರ ಬಳಿಯೂ ಕ್ಯಾಮೆರಾ ಇರಲ್ಲ. ಎಲ್ಲಾ ಥರದ ಲೆನ್ಸ್ ಖರೀದಿಸಲು ಎಲ್ಲರಿಗೂ ಸಾಧ್ಯವೂ ಆಗುವುದಿಲ್ಲ. ಹೀಗೆಲ್ಲಾ ಇದ್ದಾಗ ಫೋಟೋಗ್ರಫಿ ಆಸೆ ಇದ್ದರೂ ಫೋಟೋಗ್ರಫಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಂತ ಫೋಟೋಗ್ರಫಿ ಪ್ರೇಮಿಗಳು ನಿರಾಶರಾಗುವುದು ಬೇಡ. ಫೋಟೋಗ್ರಫಿ ಇಷ್ಟಪಡುವವರಿಗೆ ಫೋಟೋಗ್ರಫಿ ಸಾಧನಗಳನ್ನು ಬಾಡಿಗೆ ನೀಡಲಿಕ್ಕೆಂದೇ ಒಂದು ಸಂಸ್ಥೆ ಇದೆ. ಅದರ ಹೆಸರು ಟೋ ಹೋಲ್ಡ್ ಅಂತ.
ಏನಿದು ಟೋ ಹೋಲ್ಡ್?
ಟೋ ಹೋಲ್ಡ್ ಫೋಟೋಗ್ರಫಿ ಪ್ರಿಯರ ಬೆಸ್ಟ್ ಫ್ರೆಂಡು. ಟೋ ಹೋಲ್ಡ್ ಫೋಟೋಗ್ರಫಿ ಮಾಡುವ ಆಸಕ್ತಿ ಇರುವವರಿಗೆ ಫೋಟೋಗ್ರಫಿ ಸಾಧನಗಳನ್ನು ಬಾಡಿಗೆಗೆ ನೀಡುತ್ತದೆ. ಇಲ್ಲಿ ನಿಕಾನ್ ಮತ್ತು ಕ್ಯಾನನ್ ಕಂಪನಿಯ ವಿವಿಧ ಕ್ಯಾಮೆರಾಗಳು ಬಾಡಿಗೆಗೆ ಸಿಗುತ್ತವೆ. ಬೇಸಿಕ್ ಕ್ಯಾಮೆರಾದಿಂದ ಹಿಡಿದು ಅತ್ಯಾಧುನಿಕ ಕ್ಯಾಮೆರಾಗಳು ಕೂಡ ಇಲ್ಲಿ ಲಭ್ಯ. ಅದರ ಜೊತೆಗೆ ಫೋಟೋಗ್ರಫಿಗೆ ಬೇಕಾದ ಟ್ರೈಪಾಡ್, ಕೇಬಲ್ ಮುಂತಾದವು ಕೂಡ ಬಾಡಿಗೆಗೆ ಸಿಗುತ್ತದೆ.
ನೀವು ಫೋಟೋಗ್ರಫಿ ಮಾಡಲು ಹೊರಟಿರೆಂದಾದರೆ ನೀವು ನಿಮಗೆ ಬೇಕಾದ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುಗು. ಇಂಟರೆಸ್ಟಿಂಗ್ ಅಂದ್ರೆ ಈ ಟೋ ಹೋಲ್ಡ್ ಸಂಸ್ಥೆ ಕಟ್ಟಿದ್ದು ಸಚಿನ್ ರೈ, ಸಂತೋಷ್ ಸಾಲಿಗ್ರಾಮ್ ಮತ್ತು ಜಯಂತ್ ಶರ್ಮಾ ಎಂಬ ಪ್ರೊಫೆಷನಲ್ ಫೋಟೋಗ್ರಾಫರ್ಸು. ಇವರಿಗೆ ಫೋಟೋಗ್ರಫಿಯ ಆಳ ಅಗಲ ಗೊತ್ತಿದೆ. ಹಾಗಾಗಿ ಇವರು ಸೇರಿಕೊಂಡು ಆಗಾಗ ಫೋಟೋಗ್ರಫಿ ವರ್ಕ್‌ಶಾಪ್‌ಗ್ಳನ್ನೂ ನಡೆಸುತ್ತಾರೆ. ನಿಮಗೆ ಆಸಕ್ತಿ ಇದ್ದರೆ ಭಾಗವಹಿಸಬಹುದು.
ನೀವು ಕ್ಯಾಮೆರಾ ಬಾಡಿಗೆಗೆ ಪಡೆಯಬೇಕಾದರೆ ಮೊದಲು ಟೋಹೋಲ್ಡ್ ನಲ್ಲಿ ನಿಮ್ಮ ಐಡಿ ಪ್ರೂಫ್ ಇತ್ಯಾದಿಗಳನ್ನು ನೀಡಿ ರೂ.500 ಪಾವತಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು. ನಂತರ ಕ್ಯಾಮೆರಾ ಬಾಡಿಗೆಗೆ ಪಡೆಯಬಹುದು. ಬೇಕಿದ್ದರೆ ನಿಮ್ಮ ಮನೆಗೇ ತರಿಸಿಕೊಳ್ಳಬಹುದು.
ಬಾಡಿಗೆ ದರ- ಆರಂಭಿಕ ಬೆಲೆ ರೂ.250
ಎಲ್ಲಿ- 359, 16 ಮೇನ್, 4ಟಿ ಬ್ಲಾಕ್, ಜಯನಗರ
ದೂ- 080 22442211
ಫೇಸ್‌ಬುಕ್-ttps://www.facebook.com/toehold.in/
ವೆಬ್‌ಸೈಟ್- www.toehold.in
-ಉದಯವಾಣಿ
Comments are closed.