ಮನೋರಂಜನೆ

ಕ್ರಿಕೆಟ್‌ ವೇಳೆ ಮಳೆ: ನಗ್ನವಾಗಿ ಕುಣಿದಾಡಿದ ಆಸೀಸ್‌ ಅಭಿಮಾನಿಗೆ ಜೈಲು!

Pinterest LinkedIn Tumblr

asishಪಲ್ಲೆಕಿಲೆ : ಇಲ್ಲಿ ಪ್ರವಾಸಿ ಆಸ್ಟ್ರೇಲಿಯ ಮತ್ತು ಆತಿಥೇಯ ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ವೇಳೆ ಮಳೆ ಅಡ್ಡಿಯಾಯಿತು.ಈ ವೇಳೆ ಆಸೀಸ್‌ನ ಅಭಿಮಾನಿಯೊಬ್ಬ ಕ್ರೀಡಾಂಗಣಕ್ಕೆ ಧುಮುಕಿ ನಗ್ನವಾಗಿ ಕುಣಿದಾಡಿ ಇದೀಗ ಕಂಬಿ ಎಣಿಸುತ್ತಿದ್ದಾನೆ.

ಮಳೆ ಬಂದ ಬಳಿಕ ಪಿಚ್‌ ಒದ್ದೆಯಾಗದಂತೆ ಕವರ್‌ಗಳನ್ನು ಹಾಸಲಾಗಿತ್ತು. ಏಕಾಏಕಿ ನುಗ್ಗಿ ಬಂದ ಭೂಪ ಮೆಳೆಯಲ್ಲಿ ನೆನೆಯುತ್ತಾ ಬಟ್ಟೆಗಳನ್ನು ಕಳಚಿ ಬಿಸಾಕಿ ಕ್ರೀಡಾಂಗಣದಲ್ಲಿ ಉರುಳಾಡಿದ್ದಾನೆ.ಪುಣ್ಯಕ್ಕೆ ಅಲ್ಲಿಂದ ವಾಪಾಸ್‌ ಬರುವಾಗ ಬಟ್ಟೆಗಳನ್ನು ಧರಿಸಿದ್ದಾನೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಆತ ಪೋಲಿಸರ ಅತಿಥಿಯಾಗಿದ್ದ.

ಈತನ ಈ ಹುಚ್ಚಾಟಕ್ಕೆ ಕ್ಯಾಂಡಿಯ ನ್ಯಾಯಾಲಯ 30 ಸಾವಿರ ರೂಪಾಯಿ ದಂಡ ವಿಧಿಸಿ 7 ದಿನಗಳ ಕಾಲ ಜೈಲಿನಲ್ಲಿಡಲು ಸೂಚಿಸಿದೆ.
-ಉದಯವಾಣಿ

Comments are closed.