ಮನೋರಂಜನೆ

ಮಾದಕವಸ್ತು ಜಾಲಕ್ಕೂ ನನಗೂ ಸಂಬಂಧವಿಲ್ಲ, ನಟಿ ಮಮತಾ

Pinterest LinkedIn Tumblr

Mamatha-webಮುಂಬಯಿ: ಬಹುಕೋಟಿ ಮೌಲ್ಯದ ಮಾದಕ ದ್ರವ್ಯ ಹಗರಣದಲ್ಲಿ ನನ್ನ ಹೆಸರನ್ನು ಕೆಲ ಪೊಲೀಸ್ ಅಧಿಕಾರಿಗಳು ಬಲವಂತವಾಗಿ ತೂರಿಸಿ ವಿವಾದಕ್ಕೆ ಸಿಲುಕಿಸಿದ್ದಾರೆ ಎಂದು ಬಾಲಿವುಡ್ ನಟಿ ಮಮತಾ ಕುಲಕರ್ಣಿ ಹೇಳಿದ್ದಾರೆ.

ಮಾದಕ ದ್ರವ್ಯ ಹಗರಣಕ್ಕೂ, ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಜೀವನ ಮತ್ತು ಉದ್ದೇಶದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ನನ್ನ ಆಟೋಬಯಾಗ್ರಫಿ ಆಫ್ ಯೋಗಿ’ ಕೃತಿ ಓದಿ ಎಂದು ಅವರು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವೇಶ್ಯಾವಾಟಿಕೆಯಲ್ಲಿದ್ದ ಮಹಿಳೆಯೊಬ್ಬಳು ಯೋಗಿಯಾದ ಸಂದರ್ಭವನ್ನು (ಕರಣ್ ಅರ್ಜುನ್ ಮತ್ತು ಆಶಿಕ್ ಆವಾರಾ ಸಿನಿಮಾದ ಅಭಿನಯ) ಸ್ಮರಿಸಿಕೊಂಡ ಅವರು, 1995ರಿಂದ ನಾನು ಬಾಲಿವುಡ್ ಜಗತ್ತನ್ನು ಬಿಟ್ಟು ಅಧ್ಯಾತ್ಮ ಸಾಧನೆಯಲ್ಲಿದ್ದೇನೆ. ಖಪೋಲಿಯಲ್ಲಿ ಆಶ್ರಮ ಹೊಂದಿರುವ ಗುರು ಗಗನ್ಗಿರಿ ಮಹಾರಾಜ್ ಶಿಷ್ಯೆಯಾಗಿ ನನ್ನ ಜೀವನ ಪಥವೇ ಬದಲಾಗಿದೆ. ಹೀಗಿರುವಾಗ ನಾನೇಕೆ ಮಾದಕ ದ್ರವ್ಯ ಜಾಲದಲ್ಲಿ ಮೂಗು ತೂರಿಸಲಿ ಎಂದವರು ಪ್ರಶ್ನಿಸಿದ್ದಾರೆ.

Comments are closed.