ಮನೋರಂಜನೆ

ರಣಬೀರ್ ಕಪೂರ್ ಹೊಸ ನಿವಾಸ ರೆಡಿ..ಶೀಘ್ರದಲ್ಲೇ ಹೊಸ ನಿವಾಸಕ್ಕೆ ಎಂಟ್ರಿ

Pinterest LinkedIn Tumblr

ranaಮುಂಬೈ: ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹೊಸ ನಿವಾಸ ರೆಡಿಯಾಗಿದೆ. ರಣಬೀರ್ ಕಪೂರ್ ಇನ್ಮುಂದೆ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ.. ಅಂದಹಾಗೆ ರಣಬೀರ್ ಸದಾ ಸುದ್ದಿಯಲ್ಲಿರೋ ನಟ.. ಇನ್ನೂ ಇಂಟರಸ್ಟಿಂಗ್ ವಿಷ್ಯ ಅಂದ್ರೆ ರಣಬೀರ್ ಕಪೂರ್ ನೂತನ ನಿವಾಸವನ್ನು ವಿನ್ಯಾಸ, ಡಿಸೈನ್ ಮಾಡಿರೋದು ಶಾರೂಖ್ ಖಾನ್ ಪತ್ನಿ ಗೌರಿ ಖಾನ್.

ಸೆಲೆಬ್ರಿಟಿಯೊಬ್ಬರಿಗೆ ಮತ್ತೊಬ್ಬ ಸೆಲೆಬ್ರಿಟಿ ಸಹಾಯ ಸಾಥ್ ನೀಡಿದ್ದಾರೆ.. ಗೌರಿ ಖಾನ್ ಮಾಡಿರುವ ವಿನ್ಯಾಸವನ್ನು ರಣಬೀರ್‌ಗೆ ತುಂಬಾ ಇಷ್ಟವಾಗಿದೆಯಂತೆ. ರಣಬೀರ್ ಕಪೂರ್ ಶೀರ್ಘದಲ್ಲೇ ತಮ್ಮ ಮನೆಗೆ ಶಿಫ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಹಳ ದಿನಗಳಿಂದ ಒಂಟಿಯಾಗಿದ್ದ ನಟ ರಣಬೀರ್ ಕಪೂರ್‌ಗೆ
ಬಹಳ ದಿನಗಳಿಂದ ಹೊಸ ಪ್ಲಾಟ್ ಖರೀದಿ ಮಾಡುವಲ್ಲಿ ನಿರತರಾಗಿದ್ದರು. ಅದು ಇದೀಗ ಅವರ ಆಸೆ ಈಡೇರಿದೆ. ಹೊಸ ಪ್ಲಾಟ್ ಖರೀದಿ ಮಾಡಿ ಮನೆ ಕೂಡ ರೆಡಿ ಆಗಿದೆ.

ಕಳೆದ ತಿಂಗಳಲ್ಲಿ ರಣಬೀರ್ ಮುಂಬೈನ ‘ಪಾಲಿ ಹಿಲ್’ ನಲ್ಲಿ ಹೊಸ ಪ್ಲಾಟ್ ಖರೀದಿ ಮಾಡಿದ್ದರು.. ಅದರ ಬೆಲೆ ಬರೋಬ್ಬರಿ 35 ಕೋಟಿಯಂತೆ..

ಹೊಸದಾಗಿ ಖರೀದಿ ಮಾಡಿರೋ ನಿವಾಸವು ಪಾರ್ಕಿಂಗ್ ಒಳಗೊಂಡಿದ್ದು, ಇದು ಕೃಷ್ಣಾ ರಾಜ್ ಮಂಜಿಲ್‌ನಿಂದ ಸಮೀಪದಲ್ಲಿದೆಯಂತೆ. ಅಲ್ಲದೇ ಪ್ಲಾಟ್ ಸುತ್ತ ಮುತ್ತ ಹಲವು ಬಾಲಿವುಡ್ ದಿಗ್ಗಜರ ಮನೆಗಳು ಸಹ ಇವೆಯಂತೆ..

Comments are closed.