ಮನೋರಂಜನೆ

ಕನ್ನಡದ ಬೋಧಕರೊಬ್ಬರನ್ನು ಪಡೆದ ನಟ ವಿವೇಕ್ ಒಬೆರಾಯ್

Pinterest LinkedIn Tumblr

raiದೆಹಲಿ: ಬಾಲಿವುಡ್‌ನ ಖ್ಯಾತ ನಟ ವಿವೇಕ್ ಒಬೆರಾಯ್ ಕನ್ನಡದ ಬೋಧಕರೊಬ್ಬರನ್ನು ಪಡೆದುಕೊಂಡಿದ್ದಾರೆ. ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದಾರೆ. ನಟ ವಿವೇಕ್ ಒಬೆರಾಯ್ ನಿವಾಸಕ್ಕೆ ಕನ್ನಡದ ಭೋದಕರೊಬ್ಬರ ಆಗಮನವಾಗಿದೆ. ಕನ್ನಡ ಕಲಿಯುವುದು ಸ್ವಲ್ಪಮಟ್ಟಿಗೆ ಕಷ್ಟ ಎನ್ನುವ ವಿವೇಕ್, ಕನ್ನಡದ ಉತ್ತಮ ಭೋದಕರೊಬ್ಬರನ್ನು ಪಡೆದುಕೊಂಡಿರುವುದರ ಬಗ್ಗೆ ಅವರಿಗೆ ಸಂತಸವಾಗಿದೆಯಂತೆ.

‘ರೈ’ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಡಾನ್ ಆಗಿ ಮಿಂಚುತ್ತಿರುವ ವಿವೇಕ ಒಬೆರಾಯ್, ರಾಮಗೋಪಾಲ ವರ್ಮಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ’ ರೈ’ ಚಿತ್ರ ಮುತ್ತಪ್ಪ ರೈ ಅವರ ಜೀವನಾಧರಿತ ಚಿತ್ರ. ಈ ಚಿತ್ರಕ್ಕಾಗಿ ವಿವೇಕ್ ಒಬೆರಾಯ್ ಕನ್ನಡ ಕಲಿಯುತ್ತಿದ್ದಾರೆ. ಕನ್ನಡದ ಭೋದಕರೊಬ್ಬರನ್ನು ಅವರು ಪಡೆದುಕೊಂಡಿದ್ದಾರಂತೆ.

ವಿವೇಕ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ಕರ್ನಾಟಕದಿಂದ ಬಂದವರು. ಕೇವಲ ವಿವೇಕ ಒಬೆರಾಯ್‌ಗೆ ಕನ್ನಡ ಕಲಿಯುವುದಕ್ಕೆ ಭೋದಕರೊಬ್ಬರೇ ಸಹಾಯ ಮಾಡುತ್ತಿಲ್ಲ. ವಿವೇಕ್ ಪತ್ನಿ ಪ್ರಿಯಾಂಕಾ ಆಳ್ವಾ ಕೂಡ ಸಹಾಯ ಮಾಡುತ್ತಿದ್ದಾರೆ.

ಬೆಂಗಳೂರಿಗರಾದ ಮುತ್ತಪ್ಪ ರೈ ಅವರ ಭಾಷೆ ಕಲಿಯುವುದು ಕಷ್ಟ.. ಕನ್ನಡ ಭಾಷೆ ಕಲಿಯುವುದು ಕಷ್ಟವಾಗುತ್ತಿದೆ. ಆದ್ರೂ ನನಗೆ ಉತ್ತಮವಾದ ಬೋಧಕರೊಬ್ಬರು ದೊರೆತಿರುವುದಕ್ಕೆ ಸಂತಸವಾಗಿದೆ ಎಂದು ತಿಳಿಸಿದ್ದಾರೆ.

Comments are closed.