ಬಹು ದಿನಗಳ ಬಿಡುವಿನ ನಂತರ ಮತ್ತೇ ಗಾಂಧಿನಗರಕ್ಕೆ ಬಂದಿರುವ ಹಿರಿಯ ನಿರ್ದೇಶಕ ಮಹೇಶ್ ಸುಖಧರೆ ಅವರು ಕೈಗೆತ್ತಿಕೊಂಡಿದ್ದ ಸಂಪೂರ್ಣ ಗ್ರಾಮೀಣ ಸೊಗಡನ್ನು ಬಿಂಬಿಸುವ ಹ್ಯಾಪಿ ಬರ್ತೇಡೇ ಚಿತ್ರದ ಚಿತ್ರಕರಣವು ಪೂರ್ಣಗೊಂಡಿದೆ.
ಮಂಡ್ಯ ಸುತ್ತಮುತ್ತಲ ಭಾಗಗಳಲ್ಲಿ ಸುಮಾರು ನೂರು ದಿನಗಳ ಕಾಲ ಹ್ಯಾಪಿ ಬರ್ತೇಡೇ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಇಲ್ಲಿಯವರೆಗೆ ಸಾಗಿ ಬಂದ ಹಾದಿಯನ್ನು ನೋಡಿದರ ಪಕ್ಕದ ಮನೆ ಪ್ರೇಮಕಥೆ ನಮ್ಮ ಕಣ್ಮುಂದೆ ಬರುವಂತಾಗಿದೆ ಎನ್ನುತ್ತಾರೆ ನಿರ್ದೇಶಕ ಸುಖಧರೆ.
ಹ್ಯಾಪಿ ಬರ್ತೇಡೇ ಚಿತ್ರದ ನೋಡುವ ಪ್ರೇಕ್ಷಕರಿಗೆ ಬಹುದಿನಗಳ ನಂತರ ಉತ್ತಮ ವನ್ನು ನೋಡಿದ ಅನುಭವವಾಗಲಿದೆ ಆ ರೀತಿ ಚಿತ್ರವನ್ನು ನಿರೂಪಿಸಲಾಗಿದೆ ಎಂದು ಅವರು ಚಿತ್ರದ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡರು.
ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶನ ಮಾಡುವಾಗ ಭಯಪಟ್ಟಂತೆ ಹ್ಯಾಪಿ ಬರ್ತೇಡೇ ಚಿತ್ರವನ್ನು ನಿರ್ದೇಶಿಸುವಾಗ ಭಯವಾಗಿತ್ತು. ಚಿತ್ರಮುಗಿಯುತ್ತಾ ಹೋಗುತ್ತಿದ್ದಂತೆ ಭಯ ಹೋಗಿ ಸಂಭ್ರಮ ಮೂಡಿದೆ ಎನ್ನುತ್ತಾರೆ.
ನಾಯಕ ಸಚಿನ್ ಹಾಗೂ ನಾಯಕಿ ಸಂಸ್ಕೃತಿ ಶಣೈ ಅವರನ್ನು ಆಯ್ಕೆ ಮಾಡಿ ಸಾಕಷ್ಟು ತರಬೇತಿ ನೀಡಿದೆವು. ಸಿನಿಮಾಕ್ಕೆ ಯಾವರೀತಿ ಕೆಲಸ ಮಾಡಿಸಿ ಕೊಳ್ಳಬೇಕೋ ಅದಕ್ಕಿಂತ ಮಿಗಿಲಾಗಿ ಅವರಿಬ್ಬರಿಂದ ದುಡಿಸಿಕೊಳ್ಳಲಾಗುತ್ತದೆ. ಕೊನೆಗೆ ಉತ್ತಮ ಚಿತ್ರವಾಗುವ ನಮ್ಮ ಗುರಿ ತಲುಪಿದ್ದೇವೆ ಎಂದರು ಸುಖಧರೆ.
ಹ್ಯಾಪಿ ಬರ್ತೇಡೇ ಚಿತ್ರದ ಟೈಲರ್ ಹಾಗೂ ಹಾಡೊಂದನ್ನು ಬಿಡುಗಡೆ ಮಾಡಿದ ಹಿರಿಯ ನಟ ಅಂಬರೀಷ್ ಅವರು ಚಿತ್ರದ ಶೀರ್ಷಿಕೆಯು ಹೊಸದಾಗಿ ಬರುವ ನಾಯಕ ನಾಯಕಿಗೆ ಹುಟ್ಟುಹಬ್ಬದ ದಿನವಾಗಿರುತ್ತದೆ. ಅಷ್ಟೊಂದು ಸಂಭ್ರಮ ಬಿಡುಗಡೆಯಾಗುವ ತನಕ ಗೆಲ್ಲುವತನಕ ಇರಬೇಕು ಎನ್ನುತ್ತಾರೆ.
ನಾಯಕ ಸಚಿನ್ ಅವರ ತಂದೆ ಚೆಲುವರಾಯಸ್ವಾಮಿ ನಾನು ಸ್ನೇಹಿತರು. ಆತನ ಒತ್ತಾಯಕ್ಕೆ ಮಣಿದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರೀಕರಣದ ವೇಳೆ ಡಬ್ಬಿಂಗ್ ಮಾಡುವಾಗ ನೋಡಿದ್ದೇನೆ. ನಾಯಕನಿಗೆ ಶ್ರದ್ಧೆಯಿರುವುದು ಕಂಡು ಬಂದಿದೆ. ಆತನಿಗೆ ಒಳ್ಳೆಯದಾಗಲಿ, ಉತ್ತಮ ಭವಿಷ್ಯ ಕಂಡುಕೊಳ್ಳಲಿ ಎಂದು ಅಂಬರೀಷ್ ಹಾರೈಸಿದರು.
ಹೊಸಬರೊಂದಿಗೆ ಕೆಲಸ ಮಾಡುವುದರಿಂದ ನಾನು ಕೂಡ ಹೊಸಬನಾಗಿದ್ದೇನೆ. ಹಾಡು, ಸಂಭಾಷಣೆ, ಸಾಹಿತ್ಯ ಎಲ್ಲವೂ ವಿಭಿನ್ನವಾಗಿರುವುದರಿಂದ ಸಂಗೀತ ನೀಡುವುದು ಕಷ್ಟವಾಯಿತು. ಅದಕ್ಕಾಗಿ ಬಹಳ ಸಮಯ ತೆಗೆದುಕೊಂಡೆ ಎಂದರು. ಸಂಗೀತ ನಿರ್ದೇಶಕ ಹರಿಕೃಷ್ಣ.
ಹಾಡೊಂದರಲ್ಲಿ ಆಟೋ ಚೇಸ್, ಸೈಕಲ್ ಫೈಟ್ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಸಂಗೀತ ರಸಿಕರಿಗೆ ಇಷ್ಟವಾಗಲಿದೆ. ಇದೊಂದು ಒಳ್ಳೆಯ ಆಲ್ಬಂ ಆಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮಂಡ್ಯ ಹುಡುಗಿಯಾಗಿ ಮನೆ ಮಗಳ ಪಾತ್ರವಾಗಿ ನಟಿಸಿದ್ದೇನೆ. ಹ್ಯಾಪಿ ಬರ್ತೇಡೇ ನನ್ನ ಮೊದಲ ಚಿತ್ರ ಅನುಭವಿ ನಿರ್ದೇಶಕರು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಕಾರ್ಕಳ ನಮ್ಮೂರು ಆದರೂ ಕೇರಳದಲ್ಲಿ ನೆಲೆಸಿದ್ದೇನೆ ಎಂದರು ನಾಯಕಿ ಸಂಸ್ಕೃತಿ ಶಣೈ.
ಮೊದಲಿನಿಂದಲೂ ನಾಯಕನಾಗುವ ಆಸೆ ಇತ್ತು. ಅದಕ್ಕಾಗಿ ತಯಾರು ಕೂಡ ನಡೆಸಿದ್ದೆ. ನಿರ್ದೇಶಕರು ನೀಡಿದ ಸಹಕಾರದಿಂದ ಚಿತ್ರರಂಗದಲ್ಲಿ ಹ್ಯಾಪಿ ಬರ್ತೇಡೇ ಆಚರಿಸಲು ಬಂದಿದ್ದೇನೆ. ಅಂಬರೀಷ್ ಅಂಕಲ್ ನನಗೆ ಧೈರ್ಯ ತುಂಬಿದರು.
ಪ್ರಾರಂಭದಲ್ಲಿ ಭಯ ಇತ್ತು. ನಿರ್ದೇಶಕರು ನನ್ನನ್ನು ಹಿಂಬಾಲಿಸುವಂತೆ ಹೇಳಿದರು. ಅದೇ ರೀತಿ ನಡೆದುಕೊಂಡು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನಾನು ಅಭಿನಯಸಿದ್ದೇನೆ. ಎನ್ನುವುದಕ್ಕಿಂತ ನನ್ನಿಂದ ಅಭಿನಯ ಮಾಡಿಸಿದ್ದಾರೆ ಎನ್ನುವುದು ಸರಿ ಎಂದರು ನಾಯಕ ಸಚಿನ್. ನಾಯಕನ ಅಮ್ಮನ ಪಾತ್ರದಲ್ಲಿ ಅಶ್ವಿನಿ ನಟಿಸಿದ್ದಾರೆ. ಇದೇ ಜುಲೈ ಇಂದು ಮಂಡ್ಯದಲ್ಲಿ ಹ್ಯಾಪಿ ಬರ್ತೇಡೇ ಚಿತ್ರದ ಹಾಡುಗಳ ಬಿಡುಗಡೆಯ ಅದ್ಧೂರಿ ಸಮಾರಂಭ ನಡೆಯಲಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.
Comments are closed.