ಬೆಂಗಳೂರು/ ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಬಾಲಿ ಸಿನಿಮಾ ಶುಕ್ರವಾರ ವಿಶ್ವಾದ್ಯಂತ ರಿಲೀಸ್ ಆಗಿದೆ. ಮತ್ತೊಂದೆಡೆ ಬೆಂಗಳೂರಿನಿಂದ ಕಬಾಲಿಗಾಗಿ ಡಿಸೈನ್ ಮಾಡಿದ್ದ ವಿಶೇಷ ವಿಮಾನದಲ್ಲಿ ಕಬಾಲಿ ಮೊದಲ ಶೋ ತೋರಿಸುವುದಾಗಿ ಚೆನ್ನೈಗೆ ಕರೆದೊಯ್ದಿದ್ದ 180 ಮಂದಿ ರಜನಿ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.
ಸತ್ಯಂ ಥಿಯೇಟರ್ ನಲ್ಲಿ ಕಬಾಲಿ ಸಿನಿಮಾ ತೋರಿಸುವುದಾಗಿ ಈ ಮೊದಲು ಹೇಳಲಾಗಿತ್ತು. ಅದಕ್ಕಾಗಿ ತಲಾ 7,860 ರೂ. ರಜನಿ ಅಭಿಮಾನಿಗಳು ನೀಡಿದ್ದರು. ಆದರೆ ಥಿಯೇಟರ್ ಗಳಲ್ಲಿ ಟಿಕೆಟ್ ಸಂಪೂರ್ಣವಾಗಿ ಮಾರಾಟವಾಗಿದ್ದು, ಈಗ ವಡಪಳನಿಯಲ್ಲಿರುವ ಪ್ರಸಾದ್ ಥಿಯೇಟರ್ ಗೆ ಕರೆತಂದು ಸಿನಿಮಾ ನೋಡಿ ಎಂದು ಹೇಳುತ್ತಿರುವುದಾಗಿ ರಜನಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ವಿಮಾನದಲ್ಲಿ ಚೆನ್ನೈಗೆ ಬಂದು ನಮಗೆ ಏನೂ ಮಾಹಿತಿ ನೀಡದೆ ದಿಢೀರ್ ಅಂತ ಟಾಕೀಸ್ ಬದಲಾಯಿಸಿದರೆ ಹೇಗೆ? ಬೆಂಗಳೂರಲ್ಲಿ ಬೇಕಾದಷ್ಟು ದೊಡ್ಡ ಥಿಯೇಟರ್ ಗಳಿದ್ದವು. ನಮಗೆ ಒಂದೋ ಸತ್ಯಂ ಥಿಯೇಟರ್ ನಲ್ಲಿ ಕಬಾಲಿ ಸಿನಿಮಾ ತೋರಿಸಿ, ಇಲ್ಲವೇ ಹಣ ವಾಪಸ್ ಕೊಡಿ ಎಂದು ಪಟ್ಟು ಹಿಡಿದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
Comments are closed.