ಮುಂಬೈ: ಬಾಲಿವೂಡ್ ಅಂಗಳದಲ್ಲಿ ಸದಾ ಸುದ್ದಿಯಲ್ಲಿರುವ ಜೋಡಿಗಳಂದ್ರೆ ಅದು ಸಿದ್ದಾರ್ಥ ಮಲೋತ್ರಾ-ಆಲಿಯಾ ಭಟ್.. ಕೆಲ ದಿನಗಳ ಹಿಂದೆ ಆಲಿಯಾ-ಸಿದ್ದಾರ್ಥ ಮಧ್ಯೆ ಬ್ರೇಕ್ ಅಪ್ ಸುದ್ದಿ ಕೇಳಿ ಬಂದಿತ್ತು. ಇದೀಗ ಮತ್ತೆ ಇವೆರೆಡು ಜೋಡ ಗಳು ಒಟ್ಟಿಗೆ ಕಾಣಿಸಿಕೊಂಡಿವೆ. ಲಂಡನ್‌ನಲ್ಲಿ ಸಿದ್ದಾರ್ಥ ಮಲೋತ್ರಾ ಹಾಗೂ ಆಲಿಯಾ ಭಟ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಉಡ್ತಾ ಪಂಜಾಬ್ ಚಿತ್ರದ ಬಳಿಕ ನಟಿ ಆಲಿಯಾ ಜುಹೂ ನಿವಾಸದಲ್ಲಿ ತಮ್ಮ ಆಪ್ತರ, ಸ್ನೇಹಿತರ ಎದುರು ಸಿದ್ದಾರ್ಥ ಮಲೋತ್ರಾ ಬಗ್ಗೆ ಆಲಿಯಾ
ಪರಿಚಯ ಮಾಡಿಕೊಟ್ಟಿದ್ದರಂತೆ.
ಇನ್ನೂ ಗುರುವಾರ ರಾತ್ರಿ ಇಬ್ಬರು ಮುಂಬೈ ವಿಮಾನನಿಲ್ದಾಣದಿಂದ ಲಂಡನ್‌ಗೆ ತೆರಳಿದ್ದಾರಂತೆ. ಈ ವೇಳೆ ತಮ್ಮ ಫೊಟೋ ಕ್ಲಿಕ್ ಮಾಡದಂತೆ ಫೊಟೋಗ್ರಾಫರ್‌ಗೆ ಸಿದ್ದಾರ್ಥ ಸೂಚಿಸಿದ್ದರು. ತಮ್ಮ ವೈಯಕ್ತಿಕ ಕೆಲಸಕ್ಕಾಗಿ ನಾನು ತೆರಳುತ್ತಿಲ್ಲ ಎಂದು ನಟ ಸಿದ್ದಾರ್ಥ ಇದೇ ವೇಳೆ ಹೇಳಿಕೊಂಡಿದ್ದಾರೆ.
Comments are closed.