ನವದೆಹಲಿ: ಅನೇಕ ಇಂಗ್ಲಿಷ್ ಕ್ರಿಕೆಟರ್‌ಗಳು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಕಮ್‌ಬ್ಯಾಕ್ ಅನ್ನು ವಿರೋಧಿಸಿರುವ ನಡುವೆ, ಭಾರತದ ಬ್ಯಾಟಿಂಗ್ ಲಿಜೆಂಡ್ ಸಚಿನ್ ತೆಂಡೂಲ್ಕರ್ ಯುವ ಬೌಲರ್‌ಗೆ ಬೆಂಬಲವಾಗಿ ನಿಂತಿದ್ದಾರೆ. ಅಮೀರ್ ಶಿಕ್ಷೆಯನ್ನು ಅನುಭವಿಸಿರುವುದರಿಂದ ಅವರ ಕಮ್‌ಬ್ಯಾಕ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ.
ಅಮೀರ್ ಅವರಲ್ಲಿ ಬೌಲಿಂಗ್ ಕೌಶಲ್ಯವಿದ್ದು, ಇಂಗ್ಲೆಂಡ್ ವಿರುದ್ಧ ಅವರು ವಿಶೇಷ ಪ್ರದರ್ಶನ ನೀಡುತ್ತಾರೆಂದು ಮಾಸ್ಟರ್ ಬ್ಲಾಸ್ಟರ್ ಆಶಿಸಿದರು.
ಅಮೀರ್ ಅವರು ಎರಡನೇ ಅವಕಾಶಕ್ಕೆ ಅರ್ಹರಾಗಿದ್ದಾರೆಯೇ ಎಂಬ ಪ್ರಶ್ನೆಗೆ, ಅಮೀರ್ ಈಗಾಗಲೇ 5 ವರ್ಷಗಳ ನಿಷೇಧದ ಶಿಕ್ಷೆ ಅನುಭವಿಸಿದ್ದು, ಅವರು ಶಿಕ್ಷೆ ಅನುಭವಿಸಿದ ಬಳಿಕವೇ ಆಟಕ್ಕೆ ಹಿಂತಿರುಗಿದ್ದಾರೆ ಎಂದು ಸಚಿನ್ ಹೇಳಿದರು.
ಅಮೀರ್ ಈಗ ಪಕ್ವ ಕ್ರಿಕೆಟರ್ ರೀತಿ ಕಾಣುತ್ತಿದ್ದು, ಕ್ರಿಕೆಟ್ ಮೈದಾನದಲ್ಲಿ ತಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರುತ್ತಾರೆಯೇ ಎಂದು ಕಾದುನೋಡಬೇಕು ಎಂದು ತೆಂಡೂಲ್ಕರ್ ಹೇಳಿದರು.
Comments are closed.