ಮನೋರಂಜನೆ

ದ್ರಾವಿಡ್ ಮನೆಗೆ ಬಂದ ಅಭಿಮಾನಿಯೊಬ್ಬಳು ನಾನು ಇಲ್ಲೇ ಇರುತ್ತೇನೆ ಎಂದಿದ್ದಳಂತೆ!

Pinterest LinkedIn Tumblr

Dravidಟೀಂ ಇಂಡಿಯಾದ ದಿ ಗ್ರೇಟ್ ವಾಲ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಕಂಡರೆ ಯಾರಿಗೆ ಇಷ್ಟವಿಲ್ಲ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ದ್ರಾವಿಡ್ ಗೆ ಯುವತಿಯರು ಕಾಟ ಕೊಟ್ಟಿದ್ದರಂತೆ ಅಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಹೌದು ಹೈದರಾಬಾದ್ ಮೂಲದ ಯುವತಿಯೊಬ್ಬಳು ಬಟ್ಟೆ ಬರೆ ಪ್ಯಾಕ್ ಮಾಡಿಕೊಂಡು ರಾಹುಲ್ ದ್ರಾವಿಡ್ ಮನೆಗೆ ಬಂದಿದ್ದಳಂತೆ. ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಪೀಡಿಸಲು ಶುರುಮಾಡಿದಾಗ ದ್ರಾವಿಡ್ ಗೆ ದಿಕ್ಕು ತೋಚದಂತಾ ಪರಿಸ್ಥಿತಿಗೆ ಸಿಲುಕಿದರಂತೆ. ಹೀಗೆ ಹಳೆಯ ನೆನಪೊಂದನ್ನು ದ್ರಾವಿಡ್ ಹೇಳಿಕೊಂಡಿದ್ದಾರೆ.

ವಿದೇಶ ಪ್ರವಾಸ ಮುಗಿಸಿಕೊಂಡು ಮನೆಗೆ ಬಂದು ಬಹಳ ಸಮಯದವರೆಗೂ ಮಲಗಿದ್ದೇ. ಸಂಜೆ ಅಮ್ಮ ಬಂದು ನನ್ನು ಎಬ್ಬಿಸಿ ನಿನ್ನನ್ನು ಅಭಿಮಾನಿಯೋರ್ವರು ಬಂದಿದ್ದು, ತುಂಬಾ ಹೊತ್ತಿನಿಂದ ಕಾಯುತ್ತಿದ್ದಾರೆ ಎಂದರು. ಸರಿ ನಾನು ಅಭಿಮಾನಿಯನ್ನು ಕಾಣಲು ಹೋದೆ. ಹೋಗಿದ್ದೆ ತಕ್ಷಣ ಆಕೆ ನನ್ನೊಂದಿಗೆ ಫೋಟೋ ತೆಗೆಸಿಕೊಂಡು ಆಟೋಗ್ರಾಫ್ ತೆಗೆದುಕೊಂಡಳು.

ನೀವು ಹೇಗಿದ್ದಿರಿ ಅಂತಾ ನಾನು ವಿಚಾರಿಸಿದೆ. ಹೈದರಾಬಾದ್ ನಿಂದ ನನ್ನನ್ನು ನೋಡಲು ಬಂದಿದ್ದು ನಿಜವಾಗಲು ಸಂತೋಷವಾಯ್ತು ಅಂದೆ. ಆಗ ಆಕೆ ಇನ್ನುಂದೆ ನಿಮ್ಮ ಮನೆಯಲ್ಲೇ ಇರುತ್ತೇನೆ ಎಂದು ಶಾಕ್ ನೀಡಿದಳು.

ತುಂಬಾ ಹೊತ್ತಿನ ತನಕ ಆಕೆಯನ್ನು ಕನ್ವಿನ್ಸ್ ಮಾಡಿ ಆಕೆಯನ್ನು ಮನೆಗೆ ಹಿಂದಿಗುವಂತೆ ಮಾಡಿದೆ. ಅಷ್ಟರಲ್ಲೇ ನಾನು ಹೈರಾಣಾಗಿ ಹೋಗಿದ್ದೆ ಎಂದು ದ್ರಾವಿಡ್ ಹೇಳಿದ್ದಾರೆ.

Comments are closed.