ಜೀವಾಹಿನಿಯಲ್ಲಿ ಮೂಡಿಬರುತ್ತಿರುವ ರುಚಿಕರ ಅಡುಗೆಗಳ ಕುರಿತಾದ ಕಾರ್ಯಕ್ರಮ “ಒಗ್ಗರಣೆ ಡಬ್ಬಿ” 850 ಕಂತುಗಳನ್ನು ಪೂರೈಸಿ ಮುನ್ನೆಡೆಯುತ್ತಿದೆ. ಈ ಸಂದರ್ಭದಲ್ಲಿ ಅಡುಗೆಯ ರೆಸಿಪಿಗಳ ಬಗ್ಗೆ ನಮಗೂ ಮಾಹಿತಿ ನೀಡಿ ಎಂದು ದೇಶ ವಿದೇಶಗಳಿಂದ ಮಾಹಿತಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿರೂಪಕ ಮುರುಳಿ ಅವರು “ಒಗ್ಗರಣೆ ಡಬ್ಬಿ”ಗೊಂದು ಆಪ್ ಬಿಡುಗಡೆ ಮಾಡಲಾಗಿದೆ.
ಹೋಟೆಲ್ ಉದ್ಯಮದಲ್ಲಿ ಹೆಸರು ಮಾಡಿರುವ ಸದಾನಂದಮಯ್ಯ ಮತ್ತು ನಟಿ ಪ್ರಿಯಾಂಕ ರಾವ್ ಆಪ್ ಬಿಡುಗಡೆ ಮಾಡಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ಆಪ್‌ನಲ್ಲಿ ೧೦೦ ಬಗೆಬಗೆಯ ಅಡುಗೆಯ ರೆಸಿಪಿಗಳಿದ್ದು, ತಮ್ಮ ಮೊಬೈಲ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಂಡರೆ ೧೦೦ ಅಡುಗೆಯ ರೆಸಿಪಿಗಳನ್ನು ಮನೆಯಲ್ಲಿ ಮಾಡಬಹುದಾಗಿದೆ.
ಒಮ್ಮೆ ಆಪ್ ಡೌನ್‌ಲೌಡ್ ಮಾಡಿಕೊಂಡರೆ ನಂತರ ಇಂಟರ್‌ನೆಟ್ ಸೌಲಭ್ಯವಿಲ್ಲದೆ ಆಪ್ ಮೂಲಕ ರೆಸಿಪಗಳನ್ನು ನೋಡಿಕೊಂಡು ಅಡುಗೆ ಮಾಡಬಹುದು.ಸ್ನೋ ಟೆಕ್ ಕಂಪನಿ ಈ ಆಪ್ ಕನ್ನಡದಲ್ಲಿ ಆಪ್ ಸಿದ್ದಪಡಿಸಿದೆ ಮುಂದಿನ ದಿನಗಳಲ್ಲಿ ಇಂಗ್ಲೀಷ್‌ನಲ್ಲಿಯ್ ಆಪ್ ಸಿದ್ದಪಡಿಸಲಾಗುವುದು ಎಂದರು ಮುರುಳಿ.
ಅಡುಗೆ ಕಾರ್ಯಕ್ರಮಕ್ಕೆ ಎಲ್ಲಡೆ ವ್ಯಾಪಕ ಬೆಂಬಲ ಸಿಗುತ್ತಿದೆ.ಹೀಗಾಗಿಯೇ ಆಪ್ ಸಿದ್ದಪಡಿಸಲಾಗಿದೆ. ಇದಕ್ಕಾಗಿ ಸ್ನೋಟೆಕ್ ಕಂಪನಿ ಆರು ತಿಂಗಳ ಕಾಲ ಸಮಯ ತೆಗೆದುಕೊಂಡಿದೆ. ಒಗ್ಗರಣೆ ಡಬ್ಬಿ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿರುವ ಅಮೇರಿಕಾದ ಅಕ್ಕ ಕನ್ನಡ ಬಳಗ ಅಮೇರಿಕಾದಲ್ಲಿ ಅಡುಗೆ ಕಾರ್ಯಕ್ರಮ ನಡೆಸಿಕೊಡಿ ಎಂದು ಮನವಿ ಮಾಡಿದ್ದಾರೆ. ಸೆ.೮ ರಂದು ಅಲ್ಲಿದೆ ತೆರಳುತ್ತಿರುವುದಾಗಿ ವಿವರ ನೀಡಿದರು.
ಒಗ್ಗರಣೆ ಡಬ್ಬಿ ಕಾರ್ಯಕ್ರಮದ ಹಿಂದೆ ೬೦ ಮಂದಿಯ ಪರಿಶ್ರಮವಿದೆ.ನಾಲ್ಕು ವರ್ಷಗಳ ಕಾಲ ೮೫೦ ಕಂತುಗಳನ್ನು ಪೂರೈಸಿ ಮುನ್ನೆಡೆಯುತ್ತಿದೆ ಎಂದು ವಿವರ ನೀಡಿದರು.
ಕಾರ್ಯಕ್ರಮಸ ನಿರ್ದೇಶಕ ನಾಗಭೂಷಣ್, ಅಡುಗೆ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಇದು ಸಹಜವಾಗಿಯೇ ಖುಷಿ ನೀಡಿದೆ ಎಂದು ಹೇಳಿದರು.
Comments are closed.