ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಹಾಗೂ ರಾಣಿ ಮುಖರ್ಜಿ ಅಭಿನಯದ ‘ಪಹೇಲಿ’ ಚಿತ್ರಕ್ಕೆ ಇಂದು 11 ವರ್ಷಗಳನ್ನು ಪೊರೈಸಿದ ಸಂಭ್ರಮ.. ಶಾರೂಖ್ ಹಾಗೂ ರಾಣಿ ಮುಖರ್ಜಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ ಪಹೇಲಿ ಚಿತ್ರರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಈ ಬಗ್ಗೆ ಟ್ವಿಟಿರ್‌ನಲ್ಲಿ ರೆಡ್ ಚಿಲ್ಲೀಸ್ ಎಂಟನೈಮೆಂಟ್ ಫ್ಯಾನ್ಸ್‌ಗಳಿಗೆ ಶೇರ್ ಮಾಡಿದೆ. ‘ಪಹೇಲಿ’ ಚಿತ್ರವನ್ನು ಅಮೋಲ್ ಪಾಲೇಕರ್ ನಿರ್ದೇಶನ ಮಾಡಿದ್ದರು. ಅಲ್ಲದೇ ಈ ಚಿತ್ರದಲ್ಲಿ ಅಮಿತಾಬ್ ಬಟ್ಟನ್ ಕೂಡ ನಟಿಸಿದ್ದರು. ಹೆಣ್ಣುಮಕ್ಕಳ ಮದುವೆ ಕಥೆ ಆಧಾರಿತ ಚಿತ್ರ ಇದಾಗಿತ್ತು.
‘ರಾಜಾ ಕಿ ಆಯೆಗಿ ಬರಾತ್’ ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಕಾಲಿಟ್ಟ ರಾಣಿ ನಂತರ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಅಮೀರಖಾನ್ ಅವರ ಮಹತ್ವಾಕಾಂಕ್ಷೆಯ ‘ಮಂಗಲಪಾಂಡೆ’ನಲ್ಲಿ ಮನೋಜ್ಞ ಅಭಿನಯ ನೀಡಿದ ರಾಣಿ,
‘ಬಂಟಿ ಔರ್ ಬಬ್ಲಿ’ ಮತ್ತು ‘ಗುಲಾಮ್’ ‘ಚಲ್ತೆ ಚಲ್ತೆ’ ‘ಪಹೇಲಿ’ ‘ಕುಚ್ ಕುಚ್ ಹೋತಾ ಹೈ’ ನಂತಹ ಕಮರ್ಷಿಯಲ್ ಚಿತ್ರಗಳನ್ನು ನೀಡಿ ನಿರ್ಮಾಪಕರ ಬೊಕ್ಕಸವನ್ನು ಬಲಿಷ್ಠಗೊಳಿಸಿದ್ದಾರೆ. ಇನ್ನೂ ಶಾರೂಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಯಿಸ್ ಚಿತ್ರ ಮುಂದಿನ ವರ್ಷದಂದು ಬಿಡುಗಡೆಯಾಗಲಿದೆ.
Comments are closed.