ಮನೋರಂಜನೆ

ಇನ್ನು ಮುಂದೆ ಜಾಸ್ತಿ ಮಾತನಾಡುವುದಿಲ್ಲ: ಸಲ್ಮಾನ್ ಖಾನ್

Pinterest LinkedIn Tumblr

salಮ್ಯಾಡ್ರಿಡ್: ‘ಸುಲ್ತಾನ್’ ಸಿನಿಮಾದ ಚಿತ್ರೀಕರಣದ ಸುಸ್ತನ್ನು ಅತ್ಯಾಚಾರಕ್ಕೊಳಗಾದ ಮಹಿಳೆಯ ಯಾತನೆಗೆ ಹೋಲಿಸಿ ವಿವಾದಕ್ಕೀಡಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್, ಇನ್ನು ಮುಂದೆ ನಾನು ಜಾಸ್ತಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಆಕಾಡೆಮಿ (ಐಫಾ) ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿದ ಸಲ್ಮಾನ್, ನಾನು ಹೆಚ್ಚು ಮಾತನಾಡುವುದಿಲ್ಲ, ಈ ಹೊತ್ತಲ್ಲಿ ಕಡಿಮೆ ಮಾತನಾಡುವುದೇ ಒಳ್ಳೆಯದು ಎಂದಿದ್ದಾರೆ.
ವಿವಾದಿತ ಹೇಳಿಕೆಯ ಬಗ್ಗೆ ಕ್ಷಮೆಯಾಚನೆ ಮಾಡಬೇಕೆಂದು ರಾಜಕೀಯ ಪಕ್ಷಗಳೂ, ರಾಷ್ಟ್ರೀಯ ಮಹಿಳಾ ಆಯೋಗ ಒತ್ತಾಯಿಸಿದ್ದರೂ, ಸಲ್ಮಾನ್ ಖಾನ್ ಈವರೆಗೆ ಕ್ಷಮೆಯಾಚಿಸಿಲ್ಲ.

Comments are closed.