ಮನೋರಂಜನೆ

ಮುತ್ತಪ್ಪ ರೈ ಜೀವನದ ಚಿತ್ರ: ಕನ್ನಡಕ್ಕೆ ಬಂದ ಒಬೆರಾಯ್‌

Pinterest LinkedIn Tumblr

Vivek-600ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿ ‘ರೈ’ ಎಂಬ ಚಿತ್ರ ಮಾಡುವುದಾಗಿ ರಾಮ್‌ ಗೋಪಾಲ್‌ ವರ್ಮ ಹಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಸುದೀಪ್‌ ಜೊತೆಗೆ ‘ರೈ’ ಚಿತ್ರ ಮಾಡುತ್ತಿರುವುದಾಗಿಯೂ ಘೋಷಿಸಿದ್ದರು ಅವರು. ಈ ಚಿತ್ರವನ್ನು ಎಂ.ಎನ್‌. ಕುಮಾರ್‌ ನಿರ್ಮಿಸುತ್ತಾರೆ ಎಂದು ಸಹ ಸುದ್ದಿಯಾಗಿತ್ತು. ಆದರೆ, ಈಗಿನ ಸುದ್ದಿಯ ಪ್ರಕಾರ, ‘ರೈ’ ಚಿತ್ರದ ನಾಯಕ ಬದಲಾಗಿದ್ದಾರೆ. ಸುದೀಪ್‌ ಮಾಡಬೇಕಿದ್ದ ಪಾತ್ರ, ಇದೀಗ ವರ್ಮ ಅವರ ಶಿಷ್ಯ ವಿವೇಕ್‌ ಒಬೆರಾಯ್‌ ಪಾಲಾಗಿದೆ. ಬರೀ ನಾಯಕನಷ್ಟೇ ಅಲ್ಲ, ಚಿತ್ರದ ನಿರ್ಮಾಪಕರೂ ಬದಲಾಗಿದ್ದಾರೆ. ‘ರೈ’ ಚಿತ್ರವನ್ನು
ನಿರ್ಮಿಸುವುದಕ್ಕೆ ಇದೀಗ ಮತ್ತೂಬ್ಬ ನಿರ್ಮಾಪಕ ಸಿ.ಆರ್‌. ಮನೋಹರ್‌ ಮುಂದಾಗಿದ್ದಾರೆ.

ಇಷ್ಟಕ್ಕೂ ರಾಮ್‌ ಗೋಪಾಲ್‌ ವರ್ಮ ಅವರು ಸುದೀಪ್‌ ಅವರನ್ನು ಕೈಬಿಟ್ಟು, ವಿವೇಕ್‌ ಒಬೆರಾಯ್‌ ಅವರ ಕೈ ಹಿಡಿದಿದ್ದು ಏಕೆ. ಇದಕ್ಕೆ ವರ್ಮ ನಿಖರವಾಗಿ ಉತ್ತರಿಸಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಸುದೀಪ್‌ ಬದಲಿಗೆ ವರ್ಮ ಅವರ ಜೊತೆಗೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಚಿತ್ರವನ್ನು ವರ್ಮ ಅವರು ಕನ್ನಡ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ದೇಶಿಸುವುದಕ್ಕೆ ಮುಂದಾಗಿದ್ದಾರೆ. ‘ರೈ’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರು, ಮುಂಬೈ, ದುಬೈ ಮತ್ತು ಲಂಡನ್‌ನಲ್ಲಿ ಮಾಡುವುದಕ್ಕೆ ಉದ್ದೇಶಿಸಿದ್ದಾರೆ.

ಜಗತ್ತಿನ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಾದ ಪಾಬ್ಲೋ ಎಸ್ಕೋಬಾರ್‌, ದಾವೂದ್‌ ಇಬ್ರಾಹಿಂ, ಆಲ್‌ ಕಪೋನ್‌ ಮುಂತಾದವರೆಲ್ಲಾ ರೈ ಅವರ ಮುಂದೆ ಏನೂ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ವರ್ಮ, ಮುತ್ತಪ್ಪ ರೈ ಅವರಿಂದಲೇ ಚಿತ್ರದ ಮೇ ಒಂದರಂದು ಪೋಸ್ಟರ್‌ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಮೇ ಒಂದರಂದು ರೈ ಅವರ ಹುಟ್ಟುಹಬ್ಬವಾದ್ದರಿಂದ, ಅಂದೇ ಪೋಸ್ಟರ್‌ ಬಿಡುಗಡೆ ಸೂಕ್ತ ಎಂಬುದು ಅವರ ಅನಿಸಿಕೆ. ಅಂದಿನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
-ಉದಯವಾಣಿ

Write A Comment