ಅಂತರಾಷ್ಟ್ರೀಯ

ವೆಸ್ಟ್ ಇಂಡೀಸ್ ವಿಶ್ವಕಪ್ ಗೆದ್ದರೂ ಚಾಂಪಿಯನ್ಸ್ ಟ್ರೋಫಿ ಆಡಕ್ಕಾಗಲ್ಲ …! ಯಾಕೆ ಎಂಬುದು ಇಲ್ಲಿದೆ ಓದಿ…

Pinterest LinkedIn Tumblr

West Indies winner_Apr 3-2016-029

ಕೋಲ್ಕತಾ: ಬಲಾಢ್ಯ ತಂಡಗಳನ್ನೇ ಮಣಿಸಿ ಚುಟುಕು ಕ್ರಿಕೆಟ್ ನ ವಿಶ್ವಕಪ್ ಎತ್ತಿ ಹಿಡಿದು ವಿಶ್ವ ಸಾಮ್ರಾಟರಾಗಿರುವ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡುವ ಅರ್ಹತೆ ಕಳೆದುಕೊಂಡಿದೆ.

ಅರೆ ಇದೇನಿದು ವಿಶ್ವಚಾಂಪಿಯನ್ನರು ಅರ್ಹತೆ ಕಳೆದುಕೊಂಡರೇ ಎಂದು ಆಶ್ಚರ್ಯಪಡಬೇಡಿ. ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಪಾಲ್ಗೊಳ್ಳಲು ವಿಂಡೀಸ್ ಎದುರಾಗಿರುವುದು ಅದರ ರ್ಯಾಕಿಂಗ್ ತೊಡಕು. ಟಿ20 ವಿಶ್ವಕಪ್ ಗೆದ್ದು ವಿಂಡೀಸ್ ತಂಡ ತನ್ನ ಸ್ಥಾನವನ್ನು ಉತ್ತಮ ಪಡಿಸಿಕೊಂಡಿದೆಯಾದರೂ, ಏಕದಿನ ರ್ಯಾಕಿಂಗ್ ನಲ್ಲಿ ಅದರ ಸ್ಥಾನ ಕುಸಿದಿದೆ. ಪ್ರಸ್ತುತ ವಿಂಡೀಸ್ ತಂಡ 9 ನೇ ಸ್ಥಾನದಲ್ಲಿದ್ದು, ಬಾಂಗ್ಲಾದೇಶ 8ನೇ ಸ್ಥಾನದಲ್ಲಿದೆ.

ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೆ ರ್ಯಾಕಿಂಗ್ ಪಟ್ಟಿಯಲ್ಲಿರುವ ಮೊದಲ 8 ತಂಡಗಳು ಮಾತ್ರ ಅರ್ಹತೆ ಹೊಂದಿದ್ದು, 9ನೇ ರ್ಯಾಂಕ್ ಪಡೆದಿರುವ ವೆಸ್ಟ್ ಇಂಡೀಸ್ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಕಳೆದುಕೊಂಡಿದೆ. ಆದರೆ ಟಿ20 ವಿಶ್ವಕಪ್ ನ ಅಂತಿಮಘಟ್ಟದ ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ವಿರೋಚಿತಕ ಸೋಲು ಕಂಡಿದ್ದ ಬಾಂಗ್ಲಾದೇಶ ತಂಡ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದೆ.

ಮುಂಬರುವ 2017ಜೂನ್ 1ರಿಂದ 18ರವೆರೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದ್ದು, ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಟೂರ್ನಿಗೆ ಇಂಗ್ಲೆಂಡ್ ಆತಿಥ್ಯವಹಿಸಿದೆ.

Write A Comment