ಮನೋರಂಜನೆ

ಮಾರುತಿ 800 ಹತ್ತಿ ಬಂದ ‘ಹಾಸ್ಯ ಮಹಾರಾಜ್‌’

Pinterest LinkedIn Tumblr

sharan-shruti20ಸ್ಯಾಂಡಲ್ ವುಡ್ ನಲ್ಲಿ “ಸೆಂಚುರಿ ಸ್ಟಾರ್‌’, “ಪವರ್‌ ಸ್ಟಾರ್‌’, “ಚಾಲೆಂಜಿಂಗ್‌ ಸ್ಟಾರ್‌”, ರಾಂಕಿಂಗ್ ಸ್ಟಾರ್…. ಹೀಗೆ ಪ್ರತಿ ನಾಯಕ ನಟನಿಗೂ ಒಂದೊಂದು ಬಿರುದು ಇದೆ. ಕನ್ನಡದ ಬಹುತೇಕ ನಟರ ಟೈಟಲ್‌ ಕಾರ್ಡ್‌ನಲ್ಲಿ ಅವರ ಬಿರುದಿನೊಂದಿಗೆ ಅವರ ಹೆಸರು ಬರುತ್ತದೆ. ಅದರೆ ಸತತ 5 ಹಿಟ್ ಸಿನಿಮಾ ಕೊಟ್ಟ ಮೇಲೂ ಶರಣ್ ಗೆ ಯಾವುದೇ ಬಿರುದುಗಳು ಸಿಕ್ಕಿರಲಿಲ್ಲ. ಅದಕ್ಕೆ ನಿರ್ದೇಶಕ ಹರ್ಷ ತಮ್ಮ “ಜೈ ಮಾರುತಿ 800” ಚಿತ್ರದ ಮೂಲಕ ಶರಣ್‌ಗೆ “ಹಾಸ್ಯ ಮಹಾರಾಜ್‌ ಶರಣ್‌’ ಎಂದು ಬಿರುದು ಕೊಟ್ಟಿದ್ದಾರೆ.

ಹೌದು ಈಗ ಶರಣ್‌ಗೆ ಹೊಸ ಬಿರುದು ಸಿಕ್ಕಿದೆ. ಅದು “ಹಾಸ್ಯ ಮಹಾರಾಜ್‌ ಶರಣ್‌’ ಎಂದು. ಸಾಮಾನ್ಯವಾಗಿ ಹಾಸ್ಯನಟರಿಗೆ “ಕಾಮಿಡಿ ಕಿಂಗ್‌’, “ಕಾಮಿಡಿ ಕಿಲಾಡಿ’ ಈ ಥರಾದ ಬಿರುದಿನೊಂದಿಗೆ ಕರೆಯಲಾಗುತ್ತದೆ. ಆದರೆ ಶರಣ್ ಕನ್ನಡದ ಹಾಸ್ಯ ನಾಯಕ ನಟ ಅದಕ್ಕೆ ಅವರಿಗೆ “ಹಾಸ್ಯ ಮಹಾರಾಜ್‌ ಶರಣ್‌’ ಎಂದು ಬಿರುದು ಕೊಡಲಾಗಿದೆಯಂತೆ.jai-maruti-800-kananda-song-shooting

ಸದ್ಯ ಹರ್ಷ ನಿರ್ದೇಶನದ “ಜೈ ಮಾರುತಿ 800′ ಚಿತ್ರದಲ್ಲಿ ಶರಣ್‌ ನಾಯಕರಾಗಿ ನಟಿಸಿದ್ದಾರೆ. ಶರಣ್‌ ಜೊತೆ ಕೆಲಸ ಮಾಡಿ ಹರ್ಷ ಖುಷಿಯಾದರೆ, ಹರ್ಷ ಅವರ ಡೈರೆಕ್ಷನ್‌ ನಲ್ಲಿ ಕೆಲಸ ಮಾಡಿ ಶರಣ್‌ ಕೂಡಾ ಖುಷಿಯಾಗಿದ್ದಾರೆ. ಅದರಲ್ಲೂ ಹರ್ಷಗೆ, ಶರಣ್‌ ಅವರ ಟೈಮಿಂಗ್‌, ಕಾಮಿಡಿ ಪಂಚ್‌ ಎಲ್ಲವೂ ತುಂಬಾ ಇಷ್ಟವಾಗಿದೆ. ಇಂತಹ ಟ್ಯಾಲೆಂಟೆಡ್‌ ನಟನಿಗೆ ಏನಾದರೊಂದು ಹೊಸ ಬಿರುದು ಕೊಡಬೇಕೆಂದುಕೊಂಡು ಯೋಚಿಸುತ್ತಿದ್ದಾಗ ಹರ್ಷಗೆ “ಹಾಸ್ಯ ಮಹಾರಾಜ್‌” ಎಂದಿಟ್ಟರೆ ಚೆನ್ನಾಗಿರುತ್ತದೆ ಎನಿಸಿ ಈಗ ಅದನ್ನು ಚಿತ್ರದ ಟೈಟಲ್‌ ಕಾರ್ಡ್‌ನಲ್ಲೂ ಹಾಕಿದ್ದಾರಂತೆ.

ನಿಮಗೆ ಇನ್ನೊಂದು ವಿಷಯ ಗೊತ್ತಿರಲಿ ಹರ್ಷ ನಿರ್ದೇಶನ ಮಾಡುತ್ತಿರುವ “ಜೈ ಮಾರುತಿ 800” ಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ನಟ ಶರಣ್ ಅಂತೆ. ಚಿತ್ರದ ಕಥೆ ಹೇಳಲು ಶರಣ್ ಮನೆಗೆ ಹೋದಾಗ, ಶರಣ್‌ ಕಥೆ ಕೇಳಿದ ಕೂಡಲೇ ಚಿತ್ರಕ್ಕೇ “ಜೈ ಮಾರುತಿ 800” ಎಂದು ಟೈಟಲ್‌ ಇಟ್ಟರೆ ಹೇಗೆ ಎಂದರು. ಅದರಂತೆ ಅದೇ ಟೈಟಲ್‌ ರಿಜಿಸ್ಟರ್‌ ಮಾಡಿದೆವು ಎಂಬುದು ನಿರ್ದೇಶಕ ಹರ್ಷ ಅವರ ಹರ್ಷದ ಮಾತು.

_O5A6623

ಚಿತ್ರದಲ್ಲಿ ಶರಣ್ ಗೆ ಜೋಡಿಯಾಗಿ ಶೃತಿ ಹರಿಹರನ್‌, ಶುಭಾ ಪೂಂಜಾ ನಟಿಸಿದ್ದಾರೆ. ಏನೇ ಆಗಲಿ “ಜೈ ಮಾರುತಿ 800′ ಚಿತ್ರ ಏಪ್ರಿಲ್‌ ಎರಡನೇ ವಾರ ತೆರೆಕಾಣುತ್ತಿದ್ದು, ನೀವು ಚಿತ್ರಮಂದಿರಕ್ಕೆ ಹೋಗಿ ‘ಜೈ’ ಅಂತಾ ಹೇಳೋಕೆ ರೆಡಿಯಾಗಿ.

Write A Comment