ಮನೋರಂಜನೆ

‘ರೋಜಾ’ ಬಳಿಕ ‘ಡಿಯರ್ ಡ್ಯಾಡ್’ನಲ್ಲಿ ಕಾಣಿಸ್ಕೋತಾರೆ ಸ್ವಾಮಿ!

Pinterest LinkedIn Tumblr

Swamy-Webಮಣಿರತ್ನಂ ಅವರ ‘ರೋಜಾ’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದ ಅರವಿಂದ್ ಸ್ವಾಮಿ ಈಗ ಮತ್ತೆ ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ತನುಜ್ ಭರಮಾರ್ ಅವರ ‘ಡಿಯರ್ ಡ್ಯಾಡ್’ ಚಿತ್ರದ ಮೂಲಕ 15 ವರ್ಷಗಳ ಬಳಿಕ ಮತ್ತೆ ಬಾಲಿವುಡ್ ತೆರೆಯ ಮೇಲೆ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರೆ.

45 ವರ್ಷ ಪ್ರಾಯದ ಅರವಿಂದ್ ಸ್ವಾಮಿ ಕಥಾ ವಿಷಯವನ್ನು ಮೆಚ್ಚಿಕೊಂಡು ಮತ್ತೆ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

‘ಚಿತ್ರಕಥೆ ನಾನು ಯೋಚಿಸುತ್ತಲೇ ಇದ್ದ ರೀತಿಯಲ್ಲಿ ಇದೆ ಅನ್ನಿಸಿತು. ಆ ಕಥೆಯಲ್ಲಿನ ತಂದೆಯ ಪಾತ್ರವನ್ನು ಬಹಳ ಸೊಗಸಾಗಿ ನಾನು ಮಾಡಬಲ್ಲೆ ಅನಿಸಿತು. ಹೀಗಾಗಿ ನಟಿಸಲು ಒಪ್ಪಿಕೊಂಡಿದ್ದೇನೆ’ ಎಂದಿದ್ದಾರೆ ಅರವಿಂದ್ ಸ್ವಾಮಿ.

ತಂದೆ-ಮಗನ ಸಂಬಂಧ ಹೇಳುವ ಭಾವನಾತ್ಮಕವಾದ ಈ ಚಿತ್ರದ ಪೋಸ್ಟರ್ ನಾಳೆ ಏಪ್ರಿಲ್ 1ರಂದು ಹೊರಬೀಳುವ ಸಾಧ್ಯತೆ ಇದೆಯಂತೆ. ಒಂದೊಮ್ಮೆ ಇದು ಏಪ್ರಿಲ್ ಪೂಲ್ ಆಗಿದ್ದರೆ… ಅದಕ್ಕುತ್ತರ ನಮ್ಮ ಬಳಿ ಇಲ್ಲ, ಅರವಿಂದ ಸ್ವಾಮಿ ಅವರೇ ಹೇಳಬೇಕು ಎಲ್ಲ!

Write A Comment