ಮನೋರಂಜನೆ

ಶರಣ್‌ ಈಗ ಹಾಸ್ಯ ಮಹಾರಾಜ್‌

Pinterest LinkedIn Tumblr

10_3ನಟರ ಬಿರುದು ಆಗಾಗ ಬದಲಾಗುತ್ತದೆ, ಬಿರುದು ಇಲ್ಲದ ಅದೆಷ್ಟೋ ಮಂದಿಗೆ ಹೊಸ ಬಿರುದು ಕೊಡಲಾಗುತ್ತದೆ. ಈ ತರಹ ಬಿರುದು ಕೊಡೋದು ಯಾರೆಂದರೆ ಅದು ಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಅಥವಾ ಆ ನಟನ ಅಭಿಮಾನಿಗಳು. ಕನ್ನಡದ ಬಹುತೇಕ ನಟರ ಟೈಟಲ್‌ ಕಾರ್ಡ್‌ನಲ್ಲಿ ಅವರ ಬಿರುದಿನೊಂದಿಗೆ ಅವರ ಹೆಸರು ಬರುತ್ತದೆ. ಉದಾಹರಣೆ “ಸೆಂಚುರಿ ಸ್ಟಾರ್‌’, “ಪವರ್‌ ಸ್ಟಾರ್‌’, “ಚಾಲೆಂಜಿಂಗ್‌ ಸ್ಟಾರ್‌’ …. ಹೀಗೆ ಒಬ್ಬೊಬ್ಬರಿಗೆ ಒಂದೊಂದು. ಈಗ ಶರಣ್‌ಗೆ ಹೊಸ ಬಿರುದು ಸಿಕ್ಕಿದೆ. ಅದು “ಹಾಸ್ಯ ಮಹಾರಾಜ್‌ ಶರಣ್‌’ ಎಂದು. ಸಾಮಾನ್ಯವಾಗಿ ಹಾಸ್ಯನಟರಿಗೆ “ಕಾಮಿಡಿ ಕಿಂಗ್‌’, “ಕಾಮಿಡಿ ಕಿಲಾಡಿ’ ಈ ಥರಾದ ಬಿರುದಿನೊಂದಿಗೆ ಕರೆಯಲಾಗುತ್ತದೆ. ಆದರೆ, ಶರಣ್‌ಗೆ “ಹಾಸ್ಯ ಮಹಾರಾಜ್‌ ಶರಣ್‌’ ಎಂದು ಬಿರುದು ಕೊಟ್ಟಿದ್ದು ನಿರ್ದೇಶಕ ಹರ್ಷ. ಅದಕ್ಕೆ ಕಾರಣ “ಜೈ ಮಾರುತಿ 800′ ಚಿತ್ರ.

ಹರ್ಷ ನಿರ್ದೇಶನದ “ಜೈ ಮಾರುತಿ 800′ ಚಿತ್ರದಲ್ಲಿ ಶರಣ್‌ ನಾಯಕರಾಗಿ ನಟಿಸಿದ್ದಾರೆ. ಶರಣ್‌ ಜೊತೆ ಕೆಲಸ ಮಾಡಿ ಹರ್ಷ ಖುಷಿಯಾದರೆ, ಹರ್ಷ ಅವರ ಡೈರೆಕ್ಷನ್‌ ಸ್ಟೈಲ್‌ ನೋಡಿ ಶರಣ್‌ ಕೂಡಾ ಖುಷಿಯಾಗಿದ್ದಾರೆ. ಅದರಲ್ಲೂ ಹರ್ಷಗೆ, ಶರಣ್‌ ಅವರ ಟೈಮಿಂಗ್‌, ಕಾಮಿಡಿ ಪಂಚ್‌ ಎಲ್ಲವೂ ತುಂಬಾ ಇಷ್ಟವಾಗಿದೆ. ಇಂತಹ ಟ್ಯಾಲೆಂಟೆಡ್‌ ನಟನಿಗೆ ಏನಾದರೊಂದು ಹೊಸ ಬಿರುದು ಕೊಡಬೇಕೆಂದುಕೊಂಡು ಯೋಚಿಸುತ್ತಿದ್ದಾಗ ಹರ್ಷಗೆ “ಹಾಸ್ಯ ಮಹಾರಾಜ್‌’ ಎಂದಿಟ್ಟರೆ ಚೆನ್ನಾಗಿರುತ್ತದೆ ಎನಿಸಿ ಈಗ ಅದನ್ನು ಚಿತ್ರದ ಟೈಟಲ್‌ ಕಾರ್ಡ್‌ನಲ್ಲೂ ಹಾಕಿದ್ದಾರಂತೆ. ಆದರೆ, ಶರಣ್‌ ಮಾತ್ರ ಯಾವ ಬಿರುದು ಬೇಡ, ನಿಮ್ಮ ಪ್ರೀತಿ ಇದ್ದರೆ ಸಾಕು ಎಂದರಂತೆ. ಆದರೆ, ಚಿತ್ರತಂಡ ಮಾತ್ರ ಬಿರುದು ಕೊಟ್ಟೇ ಬಿಟ್ಟಿದೆ. ಇದು ಹರ್ಷ ಶರಣ್‌ಗೆ ಬಿರುದು ಕೊಟ್ಟ ಕಥೆಯಾದರೆ, ಚಿತ್ರಕ್ಕೆ “ಜೈ ಮಾರುತಿ 800′ ಎಂದು ಟೈಟಲ್‌ ಇಟ್ಟರೆ ಚೆಂದ ಎಂದು ಹೇಳಿದ್ದು ಶರಣ್‌ ಅಂತೆ.

“ಶರಣ್‌ ಕಥೆ ಕೇಳಿದ ಕೂಡಲೇ ಚಿತ್ರಕ್ಕೇ ಜೈ ಮಾರುತಿ 800′ ಎಂದು ಟೈಟಲ್‌ ಇಟ್ಟರೆ ಹೇಗೆ ಎಂದರು. ಅದರಂತೆ ಅದೇ ಟೈಟಲ್‌ ರಿಜಿಸ್ಟರ್‌ ಮಾಡಿದೆವು’ ಎಂಬುದು ಹರ್ಷ ಮಾತು. “ಜೈ ಮಾರುತಿ 800′ ಚಿತ್ರ ಏಪ್ರಿಲ್‌ ಎರಡನೇ ವಾರ ತೆರೆಕಾಣುತ್ತಿದೆ. ಚಿತ್ರದಲ್ಲಿ ಶೃತಿ ಹರಿಹರನ್‌, ಶುಭಾ ಪೂಂಜಾ ನಾಯಕಿಯರಾಗಿ ನಟಿಸಿದ್ದಾರೆ.
-ಉದಯವಾಣಿ

Write A Comment