ಮನೋರಂಜನೆ

‘ವಿಶ್ವಕಪ್ ಟಿ-20ಯಲ್ಲಿ ಮಲಿಂಗಾ ಆಟವಾಡಲ್ಲ’

Pinterest LinkedIn Tumblr

Malinga-e1458306425229ಮುಂಬೈ: ಶ್ರೀಲಂಕಾ ತಂಡದ ವೇಗದ ಬೌಲರ್ ಲಸಿಂತ್ ಮಲಿಂಗಾ ವಿಶ್ವಕಪ್ ಟಿ-20 ಟೂರ್ನಿಯಲ್ಲಿ ಆಟವಾಡಲು ಹಿಂದೆ ಸರಿದಿದ್ದಾರೆ.

ವಿಶ್ವ ಟಿ-20 ತಂಡದ ಆಯ್ಕೆ ಪ್ರಕ್ರಿಯೆ ವೇಳೆ ಮಲಿಂಗಾ ಅವರಿಗೆ ತಂಡದ ನಾಯಕತ್ವ ಜವಾಬ್ದಾರಿ ನೀಡಲಾಗಿತ್ತು. ಆದರೆ ಮೊಣಕಾಲಿನ ಗಾಯದ ಸಮಸ್ಯೆೆಗೆ ತುತ್ತಾಗಿರುವ ಅವರಿಗೆ ಶಸ್ತ್ರ ಚಿಕಿತ್ಸೆೆ ಅಗತ್ಯವಿದೆ. ಹೀಗಾಗಿ ವಿಶ್ವಕಪ್ ಟಿ-20 ಪಂದ್ಯಗಳಲ್ಲಿ ಮಲಿಂಗಾ ಭಾಗವಹಿಸುವುದಿಲ್ಲ ಎಂದು ಲಂಕಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಲಂಕಾ ತಂಡದ ನಾಯಕರಾಗಿದ್ದ ಮಲಿಂಗಾ ಅವರು ಕಳೆದ ನವೆಂಬರ್‌ನಿಂದ ಗಾಯದ ಸಮಸ್ಯೆೆಗೆ ಒಳಗಾಗಿದ್ದು ತಂಡದಲ್ಲಿ ಕಾಣಿಸಿಕೊಂಡಿಲ್ಲ. ಮಲಿಂಗಾ ಅವರಿಗೆ ನೀಡಿದ್ದ ನಾಯಕತ್ವ ಜವಾಬ್ದಾರಿಯನ್ನು ಮ್ಯಾಥ್ಯೂಸ್ ಅವರಿಗೆ ನೀಡಲಾಗಿದೆ. ಮಲಿಂಗಾ ನಾಯಕತ್ವದಲ್ಲಿ ಲಂಕಾ ಪಡೆ ಕಳೆದ ಬಾರಿ ವಿಶ್ವ ಟಿ-20 ಚಾಂಪಿಯನ್ ಪಟ್ಟ ಧರಿಸಿತ್ತು.

Write A Comment