ಮನೋರಂಜನೆ

ಅಂಪೈರ್ ತೀರ್ಪಿಗೆ ಅಸಮಾಧಾನ ಕೊಹ್ಲಿಗೆ ದಂಡ

Pinterest LinkedIn Tumblr

virat-kohli

ಢಾಕಾ: ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದೆ.

ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15ನೇ ಓವರ್ ನಲ್ಲಿ ಮೊಹಮ್ಮದ್ ಸಮಿ ಎಸೆತದಲ್ಲಿ ಅಂಪೈರ್ ಎಲ್ ಬಿ ಡಬ್ಲೂ ಔಟ್ ನೀಡಿದರು. ಆದರೆ ಚೆಂಡು ಬ್ಯಾಟ್ ಗೆ ಬಿದ್ದ ನಂತರ ಪ್ಯಾಡ್ ಗೆ ತಗುಲಿದ್ದರಿಂದ ಕೊಹ್ಲಿ ನಗುತ್ತಾ ಅಲ್ಲೆ ನಿಂತರು ಇದು ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪಂದ್ಯದ ಶೇಕಡಾ 30ರಷ್ಟು ದಂಡ ವಿಧಿಸಿದೆ.

ಪಾಕಿಸ್ತಾನ ನೀಡಿದ 84 ರನ್ ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅವರ 49 ರನ್ ಗಳ ನೆರವಿನೊಂದಿಗೆ ಜಯ ಗಳಿಸಿತು.

Write A Comment