ಮನೋರಂಜನೆ

ನಟ ಮಾಧವನ್‌ ತಂದೆ ಸಮಾನ ಎಂದ ಮಮ್ತಾಜ್‌

Pinterest LinkedIn Tumblr

psmec11MumtazSorcar‘ಮಾಧವನ್‌ ನನಗೆ ತಂದೆಯ ಸಮಾನ’ ಎಂದು ನಟಿ ಮಮ್ತಾಜ್‌ ಸರ್ಕಾರ್‌ ಹೇಳಿದ್ದಾರೆ. ‘ಸಾಲಾ ಖಡೂಸ್‌’ ಖ್ಯಾತಿಯ ನಟಿ ಮಮ್ತಾಜ್‌ ‘ಅದ್ಭುತ ಮನುಷ್ಯ’ ಎಂದು ಮಾಧವನ್‌ ಅವರನ್ನು ಹೊಗಳಿದ್ದಾರೆ.

‘‘ಸಾಲಾ ಖಡೂಸ್‌’ ಚಿತ್ರೀಕರಣದ ಸಂದರ್ಭದಲ್ಲಿ ಅವರು ನನಗೆ ಬಹುತೇಕ ಗುರುವೇ ಆಗಿದ್ದರು. ಚಿಕ್ಕವಳಾಗಿದ್ದಾಗಿನಿಂದಲೂ ಅವರ ಅಭಿಮಾನಿಯಾಗಿದ್ದೆ. ನಾನು ಹತ್ತನೇ ತರಗತಿಯಲ್ಲಿದ್ದಾಗ ತ್ರೀ ಈಡಿಯಟ್ಸ್‌ ಚಿತ್ರ ತೆರೆಕಂಡಿತ್ತು. ಹೀಗೆ ನಾನು ಆರಾಧಿಸುತ್ತಿದ್ದ ವ್ಯಕ್ತಿಯೊಬ್ಬರು ಸಾಲಾ ಖಡೂಸ್‌ ಚಿತ್ರದಲ್ಲಿ ನನಗೆ ಮಾರ್ಗದರ್ಶನ ನೀಡಿದ್ದು ನಿಜಕ್ಕೂ ಖುಷಿಯ ವಿಷಯ’ ಎಂದು ಅವರು ಹೇಳಿಕೊಂಡಿದ್ದಾರೆ.

ಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್‌ ಅವರ ಮಗಳಾದ ಮಮ್ತಾಜ್‌ ಬಳಿ ಮಾಧವನ್‌ ಆಗೀಗ ಜಾದೂ ಮಾಡುವಂತೆ ಕೇಳಿಕೊಳ್ಳವುದೂ ಇತ್ತಂತೆ.
‘ಚಿತ್ರೀಕರಣದ ನಡುವಿನ ಸಮಯದಲ್ಲಿ ಅವರು ನನ್ನ ಬಳಿ ಬಂದು ಯಾವುದಾದರೂ ಒಂದು ಜಾದೂ ಮಾಡಿ ತೋರಿಸಿ ಎಂದು ಕೇಳುತ್ತಿದ್ದರು. ನಿರ್ದೇಶಕ ರಾಜಕುಮಾರ್‌ ಹಿರಾನಿ ಕೂಡ ನನ್ನನ್ನು ಮೊದಲ ಬಾರಿ ಭೇಟಿಯಾದಾಗ ಜಾದೂ ಮಾಡಿ ತೋರಿಸುವಂತೆ ಕೇಳಿಕೊಂಡಿದ್ದರು’ ಎಂದು ಅವರು ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ.

‘ಸಾಲಾ ಖಡೂಸ್‌’ ಚಿತ್ರ ಮಮ್ತಾಜ್‌ ಅವರ ವೃತ್ತಿ ಬದುಕಿನಲ್ಲಿ ಅವಕಾಶದ ಸುರಿಮಳೆಯನ್ನೇ ತಂದಿದೆ. ‘‘ಸಾಲಾ ಖಡೂಸ್‌ ಚಿತ್ರದ ನಂತರ ಹಿಂದಿ ಮತ್ತು ದಕ್ಷಿಣ ಭಾರತ ಚಿತ್ರರಂಗಗಳಿಂದ ನನಗೆ ನಾಲ್ಕು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುವ ಅವರು, ‘ಕೋಲ್ಕತ್ತವೋ, ಚೆನ್ನೈನಲ್ಲೋ, ಮುಂಬೈ ಚಿತ್ರರಂಗವೋ ಅವೆಲ್ಲ ನನಗೆ ಅಷ್ಟೊಂದು ಮುಖ್ಯವಲ್ಲ, ಕಥೆ ಚೆನ್ನಾಗಿರುವುದೊಂದೇ ನನಗೆ ಮಹತ್ವದ್ದು’ ಎಂದು ಖಚಿತವಾಗಿ ಹೇಳುತ್ತಾರೆ.

Write A Comment